Select Your Language

Notifications

webdunia
webdunia
webdunia
webdunia

ಅವಳ ಬಳಿ ಮಗು ಇರೋದಕ್ಕೆ ಆ ಸುಖ ಸಿಗುತ್ತಿಲ್ಲ

ಅವಳ ಬಳಿ ಮಗು ಇರೋದಕ್ಕೆ ಆ ಸುಖ ಸಿಗುತ್ತಿಲ್ಲ
ಬೆಂಗಳೂರು , ಮಂಗಳವಾರ, 16 ಜುಲೈ 2019 (12:53 IST)
ಮದುವೆಯಾಗಿ ಒಂದು ಮಗುವಾದ ಮೇಲೆ ಮಗುವಿನ ಆರೈಕೆಯಲ್ಲಿ ಹೆಣ್ಣುಮಕ್ಕಳು ತುಂಬಾ ಬ್ಯುಸಿಯಾಗಿ ಬಿಡುತ್ತಾರೆ. ಅವರಿಗೆ ಪತಿಯ ಜೊತೆ ರೊಮ್ಯಾನ್ಸ್ ಮಾಡಲು ಸಮಯವಿರುವುದಿಲ್ಲ. ಇದರಿಂದ  ನಿಮ್ಮ ದಾಂಪತ್ಯ ಜೀವನ ಬೇಸರವನ್ನುಂಟು ಮಾಡಬಹುದು. ಆದ್ದರಿಂದ ಅಮ್ಮನಾದ ಮೇಲೂ ಪತಿಯ ಜೊತೆ ರೊಮ್ಯಾಂಟಿಕ್ ಆಗಿ ಇರುವುದು ಹೇಗೆ ಎನ್ನುವುದನ್ನು ನೋಡೋಣ.

*ಮಗುವಿಗೆ ಸಾಧ್ಯವಾದಷ್ಟು ಬೇಗ ನಿದ್ರೆ ಮಾಡಿಸಿ. ಇದರಿಂದ ಮಕ್ಕಳ ಆರೋಗ್ಯವೂ ಉತ್ತಮವಾಗಿರುತ್ತದೆ. ಮಗು ಬೇಗನೆ ಮಲಗಿದರೆ ದಂಪತಿ ಸುಖ ದುಃಖ ಹಂಚಿ ಕೊಳ್ಳಲು, ರೊಮ್ಯಾನ್ಸ್ ಮಾಡಲು ಎಲ್ಲದಕ್ಕೂ ಸಮಯ ಸಿಗುತ್ತದೆ. ಇದರಿಂದ ದಂಪತಿ ವೈವಾಹಿಕ ಜೀವನವೂ ಉತ್ತಮವಾಗಿರಲು ಸಹಾಯವಾಗುತ್ತದೆ.


* ಮಗು ದೊಡ್ಡದಾಗಿದ್ದರೆ ಅವರಿಗಾಗಿ ಬೇರೆ ರೂಮ್ ಮಾಡಿ. ಇದರಿಂದ ನಿಮಗೆ ಪ್ರೈವೇಸಿ ಸಿಗುತ್ತದೆ.


* ವಾರದಲ್ಲಿ ಒಂದು ಬಾರಿಯಾದರೂ ಪತಿ-ಪತ್ನಿ ಜೊತೆಯಾಗಿ ಎಲ್ಲಾದರೂ ಹೊರಗೆ ಹೋಗಿ. ಇದನ್ನು ಜೀವನದ ಕೊನೆಯವರೆಗೂ ಮುಂದುವರೆಸಿಕೊಂಡು ಹೋದರೆ ಉತ್ತಮ.


* ಆಗಾಗ ಸಂಗಾತಿಗೆ ಗಿಫ್ಟ್ ಕೊಡಲು ಮರೆಯಬೇಡಿ. ಗಿಫ್ಟ್ ಕೊಡುತ್ತ ಹೋದರೆ ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತದೆ.  


Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗದ ಪ್ರಾರಂಭದಲ್ಲಿ ಕಾಂಡೋಮ್ ಧರಿಸದಿದ್ದರೆ ಗರ್ಭಿಣಿಯಾಗುತ್ತಾರೆಯೇ?