Select Your Language

Notifications

webdunia
webdunia
webdunia
webdunia

ದೀಪಾವಳಿ ಹಬ್ಬ... ಕತ್ತಲೆಯಿಂದ ಬೆಳಕಿನೆಡೆಗೆ...

ದೀಪಾವಳಿ ಹಬ್ಬ... ಕತ್ತಲೆಯಿಂದ ಬೆಳಕಿನೆಡೆಗೆ...
ಬೆಂಗಳೂರು , ಮಂಗಳವಾರ, 10 ಅಕ್ಟೋಬರ್ 2017 (12:49 IST)
ದೀಪಾವಳಿ ಹಬ್ಬವು ಹಿಂದೂ ಧರ್ಮದವರಿಗೆ ದೀಪಗಳ ಹಬ್ಬ. ಉತ್ತರ ಭಾರತದವರಿಗೆ ಇದು ಹೊಸ ವರ್ಷದ ಆರಂಭ. ದೀಪಾವಳಿ ಹಬ್ಬವು ಕೆಡುಕಿನ ಮೇಲೆ ಶುಭದ ಜಯವನ್ನು ಸಾರುತ್ತದೆ. ಇದರ ಹಿಂದೆ ಹಲವು ಪೌರಾಣಿಕ ಕಥೆಗಳು ಇವೆ. ದೀಪಾವಳಿಯಲ್ಲಿ ಉತ್ತರ ಭಾರತದಲ್ಲಿ ಲಕ್ಷ್ಮಿ ಪೂಜೆಯು ಪ್ರಮುಖವಾಗಿದೆ.
 
ಹಿಂದೂ ಧರ್ಮದ ಜನರು ದೀಪಾವಳಿ ಹಬ್ಬವನ್ನು ಪ್ರಪಂಚದ ಎಲ್ಲಡೆ ಬಹಳ ಸಂತೋಷ ಸಡಗರದಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬ ಬಂತೆಂದರೆ ಎಲ್ಲರಿಗೂ ಖುಷಿಯೋ ಖುಷಿ. ಅದರಲ್ಲಿ ಪ್ರಮುಖವಾಗಿ ಮಕ್ಕಳಿಗೆ. ಹೊಸ ಬಟ್ಟೆಗಳನ್ನು ತೊಟ್ಟು ಸಿಹಿತಿಂಡಿಗಳನ್ನು ಹಂಚಿ ಪಟಾಕಿಗಳನ್ನು ಸಿಡಿಸಿ ಬಹಳ ವಿಜೃಂಭಣೆಯಿಂದ ಈ ಹಬ್ಬದಲ್ಲಿ ಮಕ್ಕಳು ಮಗ್ನವಾಗುತ್ತಾರೆ.
 
ದೀಪಾವಳಿಯ ಹೊಸ್ತಿಲಲ್ಲಿ ನಿಂತು ನಮ್ಮ ದೇಶದಲ್ಲಿನ ಸ್ಥಿತಿಗತಿಯನ್ನು ಗಮನಿಸಿದಾಗ ಅತ್ಯಂತ ನೋವಿನ ಸಂಗತಿಗಳೇ ಕಾಣುತ್ತವೆ. ಇತ್ತೀಚಿಗೆ ದೇಶದೆಲ್ಲಡೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಅನೇಕ ಮಂದಿ ಜೀವ ಕಳೆದುಕೊಂಡರು. ಸಾವಿರಾರು ಜನರು ಗಾಯಗೊಂಡಿದ್ದಾರೆ. ಜನರು ಭಯಭೀತಿಗೊಳಗಾಗಿದ್ದಾರೆ. ಭಯೋತ್ಪಾದನೆಗೆ ಪ್ರೇರೆಪಿಸುವಂತಹ ಇಂತಹ ಅನೇಕ ಸಂಘಟನೆಗಳ ನಿರ್ಮ‌ೂಲನೆಯಾಗಬೇಕಿದೆ. ಇದಕ್ಕಾಗಿ ದೇಶದ ಎಲ್ಲಾ ಭಾಗದ ಜನರು ಜಾತಿ, ಮತ ಭೇದವಿಲ್ಲದೆ ಕಾರ್ಯಪ್ರವೃತ್ತರಾಗಬೇಕಿದೆ. ಇಂತಹ ದುಷ್ಕೃತ್ಯಗಳನ್ನು ನಡೆಸುವವರ ಮನದ ಕತ್ತಲನ್ನು ಓಡಿಸುವವರು ಯಾರು?
 
ಅಭಿವೃದ್ಧಿಯ ಪಥದಲ್ಲಿರುವ ಭಾರತವು ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯ ಬೆಳಕು ಕಾಣಬೇಕಿದೆ. ಇದಲ್ಲದೆ ಅನೇಕ ಜನರು ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿದ್ದಾರೆ. ಇಂತಹ ಜನರು ಪರಿಹಾರಕ್ಕಾಗಿ ಎತ್ತ ನೋಡಬೇಕು ಎಂದು ತಿಳಿಯದೇ ಕಂಗಾಲಾಗಿದ್ದಾರೆ. ಇಂತಹವರ ಮನದಲ್ಲೂ ಬೆಳಕಿನ, ಭರವಸೆಯ ಹಬ್ಬ ಮೂಡಿಸಬೇಕಿದೆ.
 
ದೇಶದಲ್ಲಿ ಶಾಂತಿ, ಮತ, ಸೌಹಾರ್ದತೆಯನ್ನುಂಟು ಮಾಡಲು ಇಂತಹ ಹಬ್ಬಗಳಿಗೆ ಸಾಧ್ಯವಾಗಲಿ. ಕೆಡುಕಿನ ಮೇಲೆ ಒಳಿತಿನ ಜಯವನ್ನು ಸಾರುವ ದೀಪಾವಳಿ ಹಬ್ಬವು ನಾಡಿನೆಲ್ಲೆಡೆ ಸುಖ, ಶಾಂತಿ, ಸೌಹಾರ್ದತೆಯ ವಾತಾವರಣವನ್ನು ಮೂಡಿಸಲಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ವೆಬ್‌ದುನಿಯಾ ಓದುಗರಿಗೆ ದೀಪಾವಳಿ ಶುಭಾಶಯಗಳು