Select Your Language

Notifications

webdunia
webdunia
webdunia
webdunia

ಬಂತು ಬಂತು 'ದೀಪಾವಳಿ' ಬಂತು...

ಬಂತು ಬಂತು 'ದೀಪಾವಳಿ' ಬಂತು...
ಬೆಂಗಳೂರು , ಸೋಮವಾರ, 9 ಅಕ್ಟೋಬರ್ 2017 (20:34 IST)
ನಾವು ಖುಷಿ ಪಡುವಂತಹ ಮತ್ತೊಂದು ಶುಭ ದಿನ ದೀಪಾವಳಿ. ನಮ್ಮ ನಾಡಿನಲ್ಲಿ ಹತ್ತು ಹಲವಾರು ಪ್ರಸಿದ್ಧ ಹಬ್ಬಗಳನ್ನು ಆಚರಿಸುತ್ತೇವೆ. ಅದರಲ್ಲಿ ಪ್ರಮುಖ ಹಬ್ಬಗಳಲ್ಲೊಂದು ದೀಪಾವಳಿ ಹಬ್ಬ. ದೀಪಾವಳಿಯನ್ನು ನಾವು ಬಹಳ ವಿಜೃಂಭಣೆಯಿಂದ ಆಚರಿಸುತ್ತೇವೆ. 
 
ಇದು ಬೆಳಕಿನ ಹಬ್ಬ. ಈ 'ಬೆಳಕಿನ ಹಬ್ಬ'ವು ನಮ್ಮನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದೊಯ್ಯುತ್ತದೆ ಎನ್ನುವುದು ಜನರ ನಂಬಿಕೆ. ಬೆಳಕಿನ ಹಬ್ಬವನ್ನು ಭಾರತದಲ್ಲಿ ಮ‌ೂರು ದಿವಸಗಳ ಕಾಲ ಆಚರಿಸುತ್ತಾರೆ. 'ದೀಪಾವಳಿ' ಬಂತು ಎಂದರೆ ಸಾಕು ಮಕ್ಕಳೆಲ್ಲರೂ ಸಂತೋಷದಿಂದ ನಲಿಯುತ್ತಾರೆ ಯಾಕೆಂದರೆ ಪಟಾಕಿ ಸಿಡಿಸುವ ಹಂಬಲ! 
 
ಹಿಂದೂ ಧರ್ಮದ ಹಲವು ಪುರಾಣ ಕಥೆಗಳಿಗೂ ದೀಪಾವಳಿ ಹಬ್ಬಕ್ಕೂ ಸಂಬಂಧವಿದೆ. ರಾಮನು ರಾವಣನನ್ನು ಕೊಂದು ಸೀತೆಯನ್ನು ರಕ್ಷಿಸಿ ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಬರುವ ಸಮಯವೆಂದೂ, ಶ್ರೀಕೃಷ್ಣನು ನರಕಾಸುರನನ್ನು ಕೊಂದ ದಿವಸವೆಂದೂ ಆಚರಿಸುತ್ತಾರೆ. 
 
ಆದರೆ ನಮ್ಮ ತುಳುನಾಡಿನ ಜನರು ದೀಪಾವಳಿಯನ್ನು ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರು ದಿನ ಬಲಿಪಾಡ್ಯಮಿಯಂದು ಆಚರಿಸುತ್ತಾರೆ. ತುಳುನಾಡಿನಲ್ಲಿ ದೀಪಾವಳಿಯಂದು ಬಲಿಯನ್ನು ಕರೆಯುವ ಸಂಪ್ರದಾಯವುಂಟು, ಬಲಿ ಕಂಭವನ್ನು ಹಾಕಿ ಅದಕ್ಕೆ ದೀಪಹಚ್ಚಿ 'ಬಲಿಯೇಂದ್ರ' ಕರೆದು ಅದರ ನಂತರ ಅವಲಕ್ಕಿಯನ್ನು ಪ್ರಸಾದವೆಂದು ಊರಿನವರಿಗೆ ಹಂಚಿ ಪಟಾಕಿ ಸಿಡಿಸುತ್ತಾರೆ.
 
ದೀಪಾವಳಿಯ ದಿವಸ ಎಲ್ಲರ ಮನೆ ಮನದಲ್ಲಿ ಸಂತೋಷ ತುಳುಕುತ್ತದೆ. ಎಲ್ಲರೂ ಹೊಸ ಉಡುಪುಗಳನ್ನು ಧರಿಸುತ್ತಾರೆ. ಗಂಡಸರೆಲ್ಲರೂ ಪಟಾಕಿ ಸಿಡಿಸುವ ಸಂಭ್ರಮದಲ್ಲಿದ್ದರೆ ಹೆಂಗಸರಿಗೆ ದೀಪ ಬೆಳಗುವ ಸಂಭ್ರಮ. ಅಂದು ಊರಿಗೆ ಊರೇ ದೀಪಾಲಂಕಾರದಿಂದ ಮನಮೋಹಕವಾಗಿ ಕಂಗೊಳಿಸುತ್ತಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಈ ಆಹಾರಗಳನ್ನು ಸೇವಿಸದಿದ್ದರೆ ತೂಕ ಹೆಚ್ಚುವುದು ಖಂಡಿತಾ!