Select Your Language

Notifications

webdunia
webdunia
webdunia
webdunia

70 ವರ್ಷಗಳಲ್ಲಿ ಇಂತಹ ಆರ್ಥಿಕ ದಿವಾಳಿಯಾಗಿರಲಿಲ್ಲ: ಪ್ರಧಾನಿ ಮೋದಿ ವಿರುದ್ಧ ಪರಮೇಶ್ವರ್ ವಾಗ್ದಾಳಿ

70 ವರ್ಷಗಳಲ್ಲಿ ಇಂತಹ ಆರ್ಥಿಕ ದಿವಾಳಿಯಾಗಿರಲಿಲ್ಲ: ಪ್ರಧಾನಿ ಮೋದಿ ವಿರುದ್ಧ ಪರಮೇಶ್ವರ್ ವಾಗ್ದಾಳಿ
ಬೆಂಗಳೂರು , ಮಂಗಳವಾರ, 10 ಜನವರಿ 2017 (17:47 IST)
ನೋಟು ನಿಷೇಧದಿಂದ ದೇಶದ ಆರ್ಥಿಕತೆ ಬುಡಮೇಲಾಗಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳ ಅವಧಿಯಲ್ಲಿ ಇಂತಹ ಆರ್ಥಿಕ ದಿವಾಳಿತನ ಆಗಿರಲಿಲ್ಲ. ನೋಟು ನಿಷೇಧದಂತಹ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರ ದೇಶದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ನಿರ್ಧಾರ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ವಾಗ್ದಾಳಿ ನಡೆಸಿದರು. 
 
ನೋಟು ನಿಷೇಧ ಹಾಗೂ ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿತ್ತು. 
 
ಬೆಂಗಳೂರಿನ ಟೌನ್‌ಹಾಲ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಜಾಥಾ ನಡೆಸಿ ನೋಟು ನಿಷೇಧದ ನಂತರ ಸಾರ್ವಜನಿಕರು ಅನುಭವಿಸಿದ ತೊಂದರೆ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ಸಲ್ಲಿಸಿದರು. 
 
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ದೇಶಾದ್ಯಂತ ಏಕಾಏಕಿ ನೋಟು ನಿಷೇಧ ಮಾಡಿದ ಪರಿಣಾಮವಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಕೂಲಿಕಾರ್ಮಿಕರು, ಬಡವರು ಹಾಗೂ ಬೀದಿ ವ್ಯಾಪಾರಿಗಳು ತಮ್ಮ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ ಎಂದು ಕಿಡಿಕಾರಿದರು.
 
ನೋಟು ನಿಷೇಧ ನಿರ್ಧಾರದಿಂದ ಜನಸಾಮಾನ್ಯರಿಗಾಗಿರುವ ತೊಂದರೆಗಳ ಬಗ್ಗೆ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲು ರಾಹುಲ್ ಗಾಧಿ ನೇತೃತ್ವದಲ್ಲಿ ನಾಳೆ ಸಭೆ ಕರೆಯಲಾಗಿದೆ. ಸಭೆಯ ನಂತರ ರಾಜ್ಯದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುತ್ತದೆ ಎಂದು ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯಿಂದ ಹೊರಹಾಕುವ ತಾಕತ್ತು ಯಾರಿಗೂ ಇಲ್ಲ: ಯಡಿಯೂರಪ್ಪಗೆ ಈಶ್ವರಪ್ಪ ಬಹಿರಂಗ ಸವಾಲ್