ಬೆಂಗಳೂರು: ನಾಯಿಗಳು ಹಗಲು ಬೊಗಳುವುದಕ್ಕೂ ರಾತ್ರಿ ಬೊಗಳುವುದಕ್ಕೂ ವ್ಯತ್ಯಾಸವಿದೆ. ರಾತ್ರಿ ವಿಚಿತ್ರವಾಗಿ ಬೊಗಳುವ ನಾಯಿಗಳು ಭಯ ಹುಟ್ಟಿಸುತ್ತವೆ. ಆದರೆ ನಾಯಿಗಳು ರಾತ್ರಿ ಯಾಕೆ ಈ ರೀತಿ ಬೊಗಳುತ್ತದೆ ನೋಡಿ.
ನಾಯಿಗಳು ರಾತ್ರಿ ಬೊಗಳುವುದಕ್ಕೆ ಏನೇನೋ ಕತೆ ಹೇಳಲಾಗುತ್ತದೆ. ಅವುಗಳು ಪ್ರೇತಾತ್ಮಗಳನ್ನು ನೋಡುತ್ತವೆ ಎಂದೆಲ್ಲಾ ಹೇಳುವವರಿದ್ದಾರೆ. ಆದರೆ ನಾಯಿಗಳು ನಿಜವಾಗಿಯೂ ಈ ಕಾರಣಕ್ಕೇ ವಿಚಿತ್ರವಾಗಿ ಬೊಗಳುತ್ತವೆಯೇ ಅಥವಾ ಬೇರೆ ಕಾರಣಗಳಿವೆಯೇ ಎಂದು ನೋಡೋಣ.
ನಾಯಿಗಳ ಕಿವಿ ತುಂಬಾ ಸೂಕ್ಷ್ಮವಾಗಿದ್ದು, ಅವುಗಳು ದೂರದಲ್ಲಿ ಬರುವ ಸಣ್ಣ ಶಬ್ಧವನ್ನೂ ಗುರುತಿಸಬಲ್ಲವು. ರಾತ್ರಿ ವೇಳೆ ಕ್ರಿಮಿ ಕೀಟಗಳ ಶಬ್ಧಗಳು ಅವುಗಳಿಗೆ ತುಂಬಾ ಕಿರಿ ಕಿರಿ ಉಂಟು ಮಾಡುತ್ತವೆ. ಅಲ್ಲದೆ, ರಾತ್ರಿಯ ಬೆಳಕು ಅವರನ್ನು ನಿದ್ರೆಗೆಡುವಂತೆ ಮಾಡುತ್ತವೆ. ಈ ಕಾರಣಕ್ಕೆ ಅವುಗಳು ಮನುಷ್ಯರ ಗಮನ ಸೆಳೆಯಲು ಭಯದಿಂದ ಈ ರೀತಿ ಬೊಗಳುತ್ತವೆ.
ಅಲ್ಲದೆ ರಾತ್ರಿ ವೇಳೆ ನಾಯಿಗಳು ನಿದ್ರೆಯಿಲ್ಲದೇ ಎಚ್ಚರವಾಗಿರುವುದೂ ಈ ಕಾರಣಕ್ಕೆ. ಹಾಗಂತ ಹಗಲು ಹೊತ್ತು ಶಬ್ಧಗಳು ಕೇಳುವುದೇ ಇಲ್ಲವೆಂದಲ್ಲ. ಹಗಲಿನ ಶಬ್ಧಕ್ಕೂ ರಾತ್ರಿಯ ಶಬ್ಧಕ್ಕೂ ವ್ಯತ್ಯಾಸವಿರುತ್ತದೆ. ಹೀಗಾಗಿಯೇ ನಾಯಿಗಳ ಮನಸ್ಥಿತಿಯೂ ಬದಲಾಗುತ್ತಿರುತ್ತದೆ.