Select Your Language

Notifications

webdunia
webdunia
webdunia
webdunia

ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಪ್ಲಸ್ ಎಂದರೇನು: ಭಾರತದಲ್ಲಿ ಎಷ್ಟು ದರವಿದೆ ಇಲ್ಲಿದೆ ವಿವರ

Social media app
ಬೆಂಗಳೂರು: ಸೋಷಿಯಲ್ ಮೀಡಿಯಾ ದೈತ್ಯ 'ಮೆಟಾ' ಸಂಸ್ಥೆಯು ತನ್ನ ಜನಪ್ರಿಯ ಆ್ಯಪ್‌ಗಳಾದ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಬಳಕೆದಾರರಿಗಾಗಿ ಪ್ರೀಮಿಯಂ ಸಬ್‌ಸ್ಕ್ರಿಪ್ಷನ್ ಸೇವೆಯನ್ನು ಪರಿಚಯಿಸಿದೆ. ಇದನ್ನು ಮೆಟಾ ವೆರಿಫೈಡ್ ಮತ್ತು ಇತ್ತೀಚಿನ ಅಪ್‌ಗ್ರೇಡ್‌ ಆದ 'ಪ್ಲಸ್' ಅಥವಾ ಬಿಸಿನೆಸ್ ಟೈರ್ ಪ್ಲಾನ್‌ಗಳ ಹೆಸರಿನಲ್ಲಿ ಕರೆಯಲಾಗುತ್ತದೆ.

ಸಾಮಾನ್ಯ ಬಳಕೆದಾರರಿಗಿಂತ ಭಿನ್ನವಾಗಿ ಹೆಚ್ಚುವರಿ ಭದ್ರತೆ, ಬ್ರ್ಯಾಂಡ್ ಪ್ರಚಾರ ಮತ್ತು ವಿಶೇಷ ಸೌಲಭ್ಯಗಳನ್ನು ಬಯಸುವ ಕ್ರಿಯೇಟರ್‌ಗಳು ಹಾಗೂ ಉದ್ಯಮಿಗಳಿಗಾಗಿ ಈ ಪ್ರೀಮಿಯಂ ಫೀಚರ್ಸ್ ವಿನ್ಯಾಸಗೊಳಿಸಲಾಗಿದೆ. ಈ ಪ್ಲಸ್ ಮತ್ತು ಪ್ರೀಮಿಯಂ ಫೀಚರ್‌ಗಳ ಬೆಲೆ ಎಷ್ಟು? ಇದರ ವಿಶೇಷತೆ ಏನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ:

ಏನಿದು ಮೆಟಾ ವೆರಿಫೈಡ್ / ಪ್ಲಸ್ ಫೀಚರ್?
ಇದು ಮೆಟಾ ಸಂಸ್ಥೆಯ ಮಾಸಿಕ ಚಂದಾದಾರಿಕೆ ಯೋಜನೆಯಾಗಿದೆ. ನಿಮ್ಮ ಪ್ರೊಫೈಲ್‌ನ ಅಧಿಕೃತತೆಯನ್ನು ಸಾಬೀತುಪಡಿಸಲು ಈ ಯೋಜನೆಯಡಿ ನಿಮ್ಮ ಖಾತೆಗೆ ಪ್ರಸಿದ್ಧ 'ಬ್ಲೂ ಟಿಕ್' ನೀಡಲಾಗುತ್ತದೆ. ಇದರೊಂದಿಗೆ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ವಾಟ್ಸಾಪ್ ಬಿಸಿನೆಸ್‌ ಆ್ಯಪ್‌ಗಳಲ್ಲಿ ಸುಧಾರಿತ ಕಸ್ಟಮೈಸೇಶನ್, ಅನಾಲಿಟಿಕ್ಸ್ ಮತ್ತು ಪ್ರಚಾರದ ಪರಿಕರಗಳು ಲಭ್ಯವಾಗುತ್ತವೆ.

ಭಾರತದಲ್ಲಿ ಇದರ ಸಬ್‌ಸ್ಕ್ರಿಪ್ಷನ್ ಬೆಲೆ ಎಷ್ಟು?
ಮೆಟಾ ಸಂಸ್ಥೆಯು ವೈಯಕ್ತಿಕ ಕ್ರಿಯೇಟರ್‌ಗಳು ಮತ್ತು ವ್ಯವಹಾರಸ್ಥರಿಗೆ ಬೇರೆ ಬೇರೆ ದರಗಳನ್ನು ನಿಗದಿಪಡಿಸಿದೆ:

ವೈಯಕ್ತಿಕ ಕ್ರಿಯೇಟರ್‌ಗಳಿಗೆ: 
ವೆಬ್ ಸೈಟ್ (Desktop) ಮೂಲಕ ಖರೀದಿಸಿದರೆ: ತಿಂಗಳಿಗೆ ₹599. 
ಮೊಬೈಲ್ ಆ್ಯಪ್ (Android / iOS) ಮೂಲಕ ಖರೀದಿಸಿದರೆ: ತಿಂಗಳಿಗೆ ₹699 (ಆ್ಯಪ್ ಸ್ಟೋರ್ ಕಮಿಷನ್ ಕಾರಣದಿಂದ ಬೆಲೆ ಕೊಂಚ ಹೆಚ್ಚು.
ಬಿಸಿನೆಸ್ ಖಾತೆಗಳಿಗೆ:  ಉದ್ಯಮಿಗಳಿಗಾಗಿ ಮೆಟಾ Standard, Plus, Premium ಮತ್ತು Max ಎಂಬ ವಿವಿಧ ಹಂತಗಳ ಪ್ಲಾನ್‌ಗಳನ್ನು ಪರಿಚಯಿಸಿದೆ. 
ಆರಂಭಿಕ ಬಿಸಿನೆಸ್ ಪ್ಲಾನ್ ಸಿಂಗಲ್ ಆ್ಯಪ್‌ಗೆ ತಿಂಗಳಿಗೆ ₹639 ರಿಂದ ಪ್ರಾರಂಭವಾಗುತ್ತದೆ. 
ಬಿಸಿನೆಸ್ ಪ್ಲಸ್ ಮತ್ತು ಅದಕ್ಕಿಂತ ಹೆಚ್ಚಿನ ಪ್ರೀಮಿಯಂ ಹಂತಗಳ ದರಗಳು ಹೆಚ್ಚುವರಿ ಫೀಚರ್‌ಗಳಿಗೆ ಅನುಗುಣವಾಗಿ ಹೆಚ್ಚುತ್ತಾ ಹೋಗುತ್ತವೆ.

ಈ ಪ್ರೀಮಿಯಂ ಸೇವೆಯ ವಿಶೇಷತೆಗಳೇನು?
ಚಂದಾದಾರಿಕೆ ಪಡೆಯುವ ಬಳಕೆದಾರರಿಗೆ ಸಾಮಾನ್ಯ ಅಕೌಂಟ್‌ಗಳಿಗಿಂತ ಹಲವು ವಿಶಿಷ್ಟ ಸೌಲಭ್ಯಗಳು ಸಿಗುತ್ತವೆ:
ಬ್ಲೂ ವೆರಿಫೈಡ್ ಬ್ಯಾಡ್ಜ್: ನಿಮ್ಮ ಪ್ರೊಫೈಲ್‌ನ ಹೆಸರಿನ ಪಕ್ಕದಲ್ಲಿ ಅಧಿಕೃತ ಬ್ಲೂ ಟಿಕ್ ಕಾಣಿಸಿಕೊಳ್ಳುತ್ತದೆ. ಇದು ಗ್ರಾಹಕರಲ್ಲಿ ಅಥವಾ ಫಾಲೋವರ್ಸ್‌ನಲ್ಲಿ ನಿಮ್ಮ ಬ್ರ್ಯಾಂಡ್ ಮೇಲಿನ ನಂಬಿಕೆಯನ್ನು ಹೆಚ್ಚಿಸುತ್ತದೆ.

ನಕಲಿ ಖಾತೆಗಳಿಂದ ರಕ್ಷಣೆ: ನಿಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ನಕಲಿ ಖಾತೆ ತೆರೆದು ವಂಚಿಸದಂತೆ ಮೆಟಾ ಸಿಸ್ಟಮ್ ಸ್ವಯಂಚಾಲಿತವಾಗಿ ಹದ್ದಿನ ಕಣ್ಣಿಡುತ್ತದೆ ಮತ್ತು ನಿಮ್ಮ ಬ್ರ್ಯಾಂಡ್ ಅನ್ನು ರಕ್ಷಿಸುತ್ತದೆ.

ನೇರ ಗ್ರಾಹಕ ಬೆಂಬಲ: ಖಾತೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೆ, ಸಾಮಾನ್ಯರಂತೆ ಕಾಯಬೇಕಾಗಿಲ್ಲ. ಮೆಟಾ ತಂಡದಿಂದ ಚಾಟ್ ಅಥವಾ ಇಮೇಲ್ ಮೂಲಕ ನೇರ ಮತ್ತು ಆದ್ಯತೆಯ ಕಸ್ಟಮರ್ ಕೇರ್ ಬೆಂಬಲ ಸಿಗುತ್ತದೆ.

ಹೆಚ್ಚುವರಿ ರೀಚ್ ಮತ್ತು ವಿಸಿಬಿಲಿಟಿ: ಮೆಟಾ ವೆರಿಫೈಡ್ ಪಡೆದ ಖಾತೆಗಳ ಪೋಸ್ಟ್‌ಗಳು, ರೀಲ್ಸ್‌ಗಳು ಇತರರ ಫೀಡ್ ಮತ್ತು ಕಮೆಂಟ್‌ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ.

ವಾಟ್ಸಾಪ್ ಬಿಸಿನೆಸ್ ಪ್ಲಸ್ ವಿಶೇಷತೆ: ವಾಟ್ಸಾಪ್ ಬಿಸಿನೆಸ್‌ನಲ್ಲಿ ಚಂದಾದಾರಿಕೆ ಪಡೆದರೆ ಕಸ್ಟಮ್ ಬಿಸಿನೆಸ್ ವೆಬ್ ಪೇಜ್ ರಚಿಸಬಹುದು. ಜೊತೆಗೆ, ಒಂದೇ ನಂಬರ್‌ನ ವಾಟ್ಸಾಪ್ ಖಾತೆಯನ್ನು ಪ್ಲಾನ್‌ಗೆ ಅನುಗುಣವಾಗಿ 4 ರಿಂದ 10 ಬೇರೆ ಬೇರೆ ಡಿವೈಸ್‌ಗಳಿಗೆ ಲಿಂಕ್ ಮಾಡಿ ಲಿಂಕ್ಡ್ ಡಿವೈಸ್ ವೈಶಿಷ್ಟ್ಯದ ಮೂಲಕ ನಿಮ್ಮ ಸಿಬ್ಬಂದಿ ಬಳಸಲು ಅನುಕೂಲ ಮಾಡಿಕೊಡಬಹುದು.
ವಿಶೇಷ ಸ್ಟಿಕ್ಕರ್‌ಗಳು: ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಸ್ಟೋರಿ ಹಾಗೂ ರೀಲ್ಸ್‌ಗಳಲ್ಲಿ ಬಳಸಲು ಕೇವಲ ಪ್ರೀಮಿಯಂ ಬಳಕೆದಾರರಿಗಾಗಿಯೇ ವಿಶೇಷ ಸ್ಟಿಕ್ಕರ್‌ಗಳನ್ನು ನೀಡಲಾಗುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಟ್‌ವರ್ಕ್ ಮತ್ತು ಬಿಸಿನೆಸ್ ಅನ್ನು ವೃತ್ತಿಪರವಾಗಿ ಬೆಳೆಸಲು ಬಯಸುವವರಿಗೆ ಈ ಪ್ರೀಮಿಯಂ ಫೀಚರ್‌ಗಳು ಅತ್ಯಂತ ಉಪಯುಕ್ತವಾಗಿವೆ.


Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಕರ್ನಾಟಕದಲ್ಲಿ ಮುಂಗಾರು ಕ್ಷೀಣವಾಗಿದ್ದರೂ ಈ ಭಾಗದಲ್ಲಿ ಇಂದೂ ಮಳೆ