Select Your Language

Notifications

webdunia
webdunia
webdunia
webdunia

ಡಾ ಸಿಎನ್ ಮಂಜುನಾಥ್ ಪ್ರಕಾರ ರಕ್ತದೊತ್ತಡ ಬರಬಾರದು ಎಂದರೆ ಈ ಕೆಲಸ ಮಾಡಬೇಕು

Dr CN Manjunath
ಅಧಿಕ ರಕ್ತದೊತ್ತಡ ಬರಬಾರದು ಎಂದರೆ ನಾವು ಜೀವನದಲ್ಲಿ ಈ ಆರು ವಿಚಾರಗಳನ್ನು ಬಿಡಬೇಕು ಎಂದು ಖ್ಯಾತ ಹೃದ್ರೋಗ ತಜ್ಞ, ಸಂಸದ ಡಾ ಸಿಎನ್ ಮಂಜುನಾಥ್ ಹಿಂದೊಮ್ಮೆ ಸಂವಾದ ಕಾರ್ಯಕ್ರಮವೊಂದರಲ್ಲಿ ಸಲಹೆ ನೀಡಿದ್ದರು.
 

ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿನವರಲ್ಲೇ ಅಧಿಕ ರಕ್ತದೊತ್ತಡ ಸಮಸ್ಯೆ ಕಂಡುಬರುತ್ತಿದೆ. ಈ ಆರೋಗ್ಯ ಸಮಸ್ಯೆಗೆ ಬಹುಮುಖ್ಯ ಕಾರಣ ಇಂದಿನ ಒತ್ತಡದ ಮತ್ತು ಧಾವಂತದ ಬದುಕು. ಅಧಿಕ ರಕ್ತದೊತ್ತಡ ಎನ್ನುವುದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಸಂವಾದವೊಂದರಲ್ಲಿ ಡಾ ಸಿಎನ್ ಮಂಜುನಾಥ್ ಅವರು ಅಧಿಕ ರಕ್ತದೊತ್ತಡ ಬರಬಾರದು ಎಂದರೆ ನಾವು ಜೀವನದಲ್ಲಿ ಆರು ‘ಎಸ್’ಗಳನ್ನು ಬಿಡಬೇಕು ಎಂದಿದ್ದರು. ಅವುಗಳೆಂದರೆ ಸಾಲ್ಟ್ (ಉಪ್ಪು), ಸ್ಪಿರಿಟ್ (ಮದ್ಯಪಾನ), ಶುಗರ್ (ಸಕ್ಕರೆ ಅಂಶದ ಆಹಾರಗಳು), ಸ್ಟ್ರೆಸ್ (ಮಾನಸಿಕ ಒತ್ತಡ), ಸ್ಮೋಕಿಂಗ್ (ಧೂಮಪಾನ), ಸೆಡೆಂಟರಿ ಲೈಫ್ (ಜಡ ಜೀವನ ಶೈಲಿ).

ಇವಿಷ್ಟನ್ನೂ ಬಿಟ್ಟರೆ ಜೀವನದಲ್ಲಿ ಆರೋಗ್ಯವಾಗಿರಬಹುದು ಎಂಬುದು ಅವರ ಸಲಹೆಯಾಗಿದೆ. ರಕ್ತದೊತ್ತಡ ಸಮಸ್ಯೆಗಳಿಗೆ ಈ ಆರೂ ಅಂಶಗಳೂ ಕಾರಣವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲಿನಂತೆ ಅಪ್ಪುಗೆ ಇಲ್ಲ, ನಗುವಿಲ್ಲ: ಡೊನಾಲ್ಡ್ ಟ್ರಂಪ್ ಜೊತೆ ಪ್ರಧಾನಿ ಮೋದಿ ಫುಲ್ ಸೀರಿಯಸ್