Select Your Language

Notifications

webdunia
webdunia
webdunia
webdunia

ಡ್ರಿಂಕ್ಸ್ ಮಾಡುವವರು ಡಾ ಸಿಎನ್ ಮಂಜುನಾಥ್ ಅವರು ಹೇಳಿದ್ದ ಈ ಟಿಪ್ಸ್ ನೋಡಿ

Dr CN Manjunath
ಬೆಂಗಳೂರು: ಪ್ರತಿ ನಿತ್ಯ ಡ್ರಿಂಕ್ಸ್ ಮಾಡ್ತೀರಾ? ಮಾಡುವುದು ಸರೀನಾ? ಇತ್ಯಾದಿ ಗೊಂದಲಗಳಿದ್ದರೆ ಖ್ಯಾತ ಹೃದ್ರೋಗ ತಜ್ಞ, ಸಂಸದ ಡಾ ಸಿಎನ್ ಮಂಜುನಾಥ್ ಸಂವಾದವೊಂದರಲ್ಲಿ ಹೇಳಿದ್ದ ಈ ಟಿಪ್ಸ್ ತಪ್ಪದೇ ಗಮನಿಸಿ.

ಕೆಲವರಿಗೆ ಪ್ರತಿನಿತ್ಯವೂ ಒಂದು ಪೆಗ್ ಆದರೂ ಇಳಿಸದೇ ಇದ್ದರೆ ನಿದ್ರೆ ಬರಲ್ಲ. ಆದರೆ ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನಲಾಗುತ್ತದೆ. ಮದ್ಯಪಾನ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನಲಾಗುತ್ತದೆ.

ಆದರೂ ಕೆಲವರು ಮದ್ಯಪಾನ ಸಂಪೂರ್ಣವಾಗಿ ತ್ಯಜಿಸಲು ಆಗದೇ ಒದ್ದಾಡುತ್ತಾರೆ. ‘ಕೆಲವರು ಪ್ರತಿನಿತ್ಯ ಅಲ್ಲದೇ ಇದ್ದರೂ ಕೆಲವೊಮ್ಮೆಯಾದರೂ ಮದ್ಯಪಾನ ಸೇವನೆ ಮಾಡಬಹುದೇ ಎಂದು ಕೇಳುತ್ತಾರೆ. ಆದರೆ ಆ ಕೆಲವೊಮ್ಮೆ ಆಗಾಗ ಬರುತ್ತದೆ ಎನ್ನುವುದು ವಿಪರ್ಯಾಸ.

ಸ್ವಲ್ಪ ಅಥವಾ ಕೆಲವೊಮ್ಮೆಯಾದರೂ ಮದ್ಯಪಾನ ಮಾಡಬಹುದು ಎಂದು ನಾವು ವೈದ್ಯರು ಸೂಚಿಸುವುದೇ ಇಲ್ಲ. ಯಾಕೆಂದರೆ ಸ್ವಲ್ಪ ತೆಗೆದುಕೊಳ್ಳಬಹುದು ಎಂದು ನಾವು ರೋಗಿಗಳಿಗೆ ಹೇಳಿದರೆ ಅವರು ಸ್ವಲ್ಪ ಎನ್ನುವುದು ಬಿಟ್ಟು ತೆಗೆದುಕೊಳ್ಳಬಹುದು ಎಂಬ ಮಾತನ್ನೇ ಗಟ್ಟಿ ಮಾಡಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಮದ್ಯಪಾನ ಮಾಡುವವರನ್ನು ಗ್ರಾಮದೊಳಗೇ ಬಿಟ್ಟುಕೊಳ್ಳುತ್ತಿರಲಿಲ್ಲವಂತೆ. ಮದ್ಯಪಾನ ಮಾಡಬಹುದು ಎಂದು ನಾವು ವೈದ್ಯರು ಖಂಡಿತಾ ಹೇಳಲ್ಲ. ಯಾಕೆಂದರೆ ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂದು ಅವರು ಸಂವಾದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕ, ಇರಾನ್ ಯುದ್ಧ ಅಂತ್ಯ ಘೋಷಿಸಿದ ಡೊನಾಲ್ಡ್ ಟ್ರಂಪ್