Publish Date: Wed, 17 Jun 2026 (09:49 IST)
Updated Date: Wed, 17 Jun 2026 (09:51 IST)
ನವದೆಹಲಿ: ಜಿ7 ಶೃಂಗಸಭೆಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಾಮುಖಿಯಾಗಿದ್ದರೂ ಪ್ರಧಾನಿ ಮೋದಿ ಮೊದಲಿನಂತೆ ಅಪ್ಪುಗೆ ಇಲ್ಲ, ನಗುವಿಲ್ಲ ಫುಲ್ ಸೀರಿಯಸ್ ಮೂಡ್ ನಲ್ಲಿದ್ದಂತೆ ಕಂಡುಬಂದಿದೆ.
ಇತ್ತೀಚೆಗಷ್ಟೇ ಹೊರ್ಮುಜ್ ಜಲಸಂಧಿ ಮಾರ್ಗದಲ್ಲಿ ಭಾರತೀಯ ನೌಕೆ ಮೇಲೆ ದಾಳಿ ನಡೆಸಿದ್ದ ಅಮೆರಿಕಾ ಸೇನೆ ಮೂವರು ಭಾರತೀಯ ನಾವಿಕರ ಸಾವಿಗೆ ಕಾರಣವಾಗಿತ್ತು. ಇದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಮೊದಲು ಆಪರೇಷನ್ ಸಿಂಧೂರ್ ಸಮಯದಲ್ಲಿ ನಾನು ಹೇಳಿದ್ದಕ್ಕೇ ಯುದ್ಧ ನಿಂತಿದೆ ಎಂದು ಭಾರತೀಯ ಸರ್ಕಾರವನ್ನು ಟ್ರಂಪ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಇದು ಭಾರತದ ಅಸಮಾಧಾನಕ್ಕೆ ಕಾರಣವಾಗಿತ್ತು.
ಹೀಗಾಗಿ ಈ ಬಾರಿ ಮೋದಿ-ಟ್ರಂಪ್ ಭೇಟಿ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಈ ಬಾರಿ ಮೋದಿ ಎಂದಿನಂತೆ ಟ್ರಂಪ್ ಜೊತೆ ಆತ್ಮೀಯವಾಗಿ ಅಪ್ಪಿಕೊಂಡು ಸ್ವಾಗತ ಕೋರಲಿಲ್ಲ. ಕೇವಲ ಕೈ ಕುಲುಕಿ ಔಪಚಾರಿಕ ಮಾತುಕತೆ ನಡೆಸಿದರು.
ಅಷ್ಟೇ ಅಲ್ಲ, ಟ್ರಂಪ್ ಎದುರೇ ಅಮೆರಿಕಾ ನಡೆಸಿದ ದಾಳಿಗೆ ಭಾರತದ ಮೂವರು ನಾವಿಕರು ಸಾವನ್ನಪ್ಪಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಆಗಿರುವ ಪ್ರಯತ್ನಗಳಲ್ಲಿನ ಪ್ರಗತಿಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಈ ಯುದ್ಧದಿಂದ ಹಲವು ರಾಷ್ಟ್ರಗಳು ಜೀವ ಹಾನಿ, ಆಸ್ತಿ ಹಾನಿಗೊಳಗಾಗಿದೆ. ಭಾರತೀಯರೂ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಟ್ರಂಪ್ ಎದುರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ