ಖ್ಯಾತ ಹೃದ್ರೋಗ ತಜ್ಞ ಡಾ ದೇವಿಪ್ರಸಾದ್ ಶೆಟ್ಟಿಯವರು ಒಂದು ಸಂವಾದದಲ್ಲಿ ಹೇಳಿರುವಂತೆ ಹೃದಯಾಘಾತ ತಡೆಗಟ್ಟಲು ಈ ಮೂರು ಪರೀಕ್ಷೆಗಳು ಕಡ್ಡಾಯವಾಗಿ ಮಾಡಿಸಬೇಕು. ಅವರು ಏನು ಹೇಳಿದ್ದಾರೆ ಇಲ್ಲಿದೆ ವಿವರ.
ಹೃದಯಾಘಾತ ಸಂಖ್ಯೆ ಯಾಕೆ ಹೆಚ್ಚಾಗುತ್ತಿದೆ ಎಂದು ನಾವು ಯೋಚಿಸಬೇಕಾಗುತ್ತದೆ. ನಾವು ಭಾರತೀಯರು ಯುರೋಪಿಯನ್ ಗಳಿಂದ ಹೆಚ್ಚು ಹೃದಯದ ಖಾಯಿಲೆಗೆ ತುತ್ತಾಗುತ್ತೇವೆ. ನಮ್ಮಲ್ಲಿ ಹೃದಯದ ರಕ್ತನಾಳಗಳ ಬ್ಲಾಕ್ ಪ್ರಮಾಣ ಹೆಚ್ಚಿರುತ್ತದೆ.
ನಮ್ಮಲ್ಲಿ ವಯಸ್ಸಾದ ತಂದೆ ಚಿಕ್ಕ ವಯಸ್ಸಿನ ಮಗನನ್ನು ಬೈಪಾಸ್ ಸರ್ಜರಿಗೆ ಕರೆದುಕೊಂಡು ಬರುತ್ತಾರೆ. 30 ದಾಟಿದ ಪುರುಷರಿಗೆ ಹೃದಯಾಘಾತ ಸಮಸ್ಯೆ ಹೆಚ್ಚು. ಮಹಿಳೆಯರಿಗೆ 40-45 ವರ್ಷದವರೆಗೂ ಈ ಸಮಸ್ಯೆ ಇಲ್ಲ. ಯಾಕೆಂದರೆ ಅವರಿಗೆ ಹಾರ್ಮೋನ್ ರಕ್ಷಿಸುತ್ತದೆ.
ಪುರುಷರು ಅತಿಯಾಗಿ ಜಿಮ್ ಮಾಡುವವರು ಹೃದಯದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಸಿಜಿ, ಎಕೋ ಕಾರ್ಡಿಯೋಗ್ರಾಮ್, ಸಿಟಿ ಆಂಜಿಯೋ ಪರೀಕ್ಷೆ ನಡೆಸಬೇಕು. ಸಿಟಿ ಆಂಜಿಯೊ ಕೆಲವೇ ಸೆಕೆಂಡುಗಳಲ್ಲಿ ಮುಗಿದು ಹೋಗುತ್ತದೆ.
ಈ ಮೂರು ಪರೀಕ್ಷೆ ನಡೆಸಿದರೆ ನಮ್ಮ ಹೃದಯದಲ್ಲಿ ಸಮಸ್ಯೆ ಇದೆಯಾ? ರಕ್ತನಾಳಗಳಲ್ಲಿ ಬ್ಲಾಕ್ ಇದೆಯಾ ಎಂಬುದೆಲ್ಲವೂ ಗೊತ್ತಾಗುತ್ತದೆ. ಹೀಗಾಗಿ ಪುರುಷರು 30 ವರ್ಷ ದಾಟಿದವರು ಅತಿಯಾಗಿ ಜಿಮ್ ಮಾಡುವವರು ಈ ಪರೀಕ್ಷೆಗಳನ್ನು ಮಾಡಿಸುವುದು ಉತ್ತಮ.