Select Your Language

Notifications

webdunia
webdunia
webdunia
webdunia

ಡಾ ದೇವಿಪ್ರಸಾದ್ ಶೆಟ್ಟಿ ಪ್ರಕಾರ ಅಧಿಕ ರಕ್ತದೊತ್ತಡ ನಿಯಂತ್ರಿಸಲು ಇದೊಂದು ಕೆಲಸ ಮಾಡಬೇಕು

Dr Devi Prasad Shetty

Krishnaveni K

ಬೆಂಗಳೂರು , ಸೋಮವಾರ, 25 ಆಗಸ್ಟ್ 2025 (10:20 IST)
ನಮ್ಮ ದೇಶದಲ್ಲಿ ಒಂದು ವಯಸ್ಸು ದಾಟಿದ ಮೇಲೆ ಬಹುತೇಕರಿಗೆ ಅಧಿಕ ರಕ್ತದೊತ್ತಡ ಖಾಯಿಲೆ ಇದೆ. ಇದನ್ನು ನಿಯಂತ್ರಿಸಲು ಇದೊಂದು ಕೆಲಸ ಮಾಡಬೇಕು ಎನ್ನುವುದು ಖ್ಯಾತ ಹೃದ್ರೋಗ ತಜ್ಞ ಡಾ ದೇವಿ ಪ್ರಸಾದ್ ಶೆಟ್ಟಿಯವರ ಸಲಹೆ.

ಅಧಿಕ ರಕ್ತದೊತ್ತಡ ಎನ್ನುವುದು ಮಧುಮೇಹದಂತೆ ಸೈಲೆಂಟ್ ಕಿಲ್ಲರ್ ಆಗಿದೆ. ಇದು ಅನೇಕ ಗಂಭೀರ ಖಾಯಿಲೆಗಳಿಗೆ ಅದರಲ್ಲೂ ವಿಶೇಷವಾಗಿ ಹೃದಯ ಸಂಬಂಧೀ ಖಾಯಿಲೆಗಳಿಗೆ ಕಾರಣವಾಗಬಹುದು. ಇದನ್ನು ಪತ್ತೆ ಹಚ್ಚುವುದು ಅಗತ್ಯ.

ಡಾ ದೇವಿ ಪ್ರಸಾದ್ ಶೆಟ್ಟಿಯವರು ಸಂದರ್ಶನವೊಂದರಲ್ಲಿ ಹೀಗೆ ಹೇಳುತ್ತಾರೆ. ’20 ವರ್ಷ ದಾಟಿದ ಪ್ರತಿಯೊಬ್ಬ ಭಾರತೀಯನೂ ಕನಿಷ್ಠ ಒಮ್ಮೆಯಾದರೂ ರಕ್ತದೊತ್ತಡ ಪರೀಕ್ಷಿಸಬೇಕು. ನಿಮಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಯಾಕೆಂದರೆ ಅರ್ಧಕ್ಕಿಂತ ಹೆಚ್ಚು ರೋಗಿಗಳಿಗೆ ತಮಗೆ ಅಧಿಕ ರಕ್ತದೊತ್ತಡವಿದೆ ಎಂದು ಗೊತ್ತೇ ಆಗುವುದಿಲ್ಲ. ಮೇಲ್ನೋಟಕ್ಕೆ ರಕ್ತದೊತ್ತಡದ ಲಕ್ಷಣಗಳು ಕಂಡುಬರದೇ ಇದ್ದರೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸದೇ ಇದ್ದರೆ ಇದು ನಿಮ್ಮ ಹೃದಯ, ಕಿಡ್ನಿ ಫೈಲ್ಯೂರ್ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು’ ಎಂದು ಅವರು ಕಿವಿ ಮಾತು ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮತಪರಿಷ್ಕರಣೆ ಯಾಕೆ ಮುಖ್ಯ ಎನ್ನುವುದಕ್ಕೆ ಬಿಹಾರದ ಈ ಘಟನೆಯೇ ಸಾಕ್ಷಿ