Select Your Language

Notifications

webdunia
webdunia
webdunia
webdunia

ಶುಗರ್ ಲೆವೆಲ್ 200 ರ ಒಳಗಿದ್ದರೆ ಮಾತ್ರೆ ತೆಗೆದುಕೊಳ್ಳಬೇಕೇ: ಡಾ ಬಿಎಂ ಹೆಗ್ಡೆ ನೀಡಿದ್ದ ಸಲಹೆಯಿದು

Dr BM Hegde

Krishnaveni K

ಬೆಂಗಳೂರು , ಶನಿವಾರ, 23 ಆಗಸ್ಟ್ 2025 (11:18 IST)
ಬಹುತೇಕರಿಗೆ ಇಂದು ವಿವಿಧ ಕಾರಣಗಳಿಂದಾಗಿ ಮಧುಮೇಹದ ಖಾಯಿಲೆ ಬರುತ್ತಿದೆ. ಬಹುತೇಕರು ಸಣ್ಣ ಪ್ರಮಾಣದ ಶುಗರ್ ಲೆವೆಲ್ ನಿಂದ ಬಳಲುತ್ತಿರುತ್ತಾರೆ. ಶುಗರ್ ಲೆವೆಲ್ 200 ರೊಳಗಿದ್ದರೆ ನಿಗದಿತವಾಗಿ ಮಾತ್ರೆ ತೆಗೆದುಕೊಳ್ಳಲೇಬೇಕೇ? ಈ ಬಗ್ಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಖ್ಯಾತ ವೈದ್ಯ ಡಾ ಬಿಎಂ ಹೆಗ್ಡೆ ಒಮ್ಮೆ ಹೀಗೆ ಹೇಳಿದ್ದರು.

ಆಹಾರ ಶೈಲಿ, ಜೀವನ ಶೈಲಿ ಮತ್ತು ಅನುವಂಶಿಕ ಕಾರಣಗಳಿಂದಾಗಿ ಮಧುಮೇಹ ಬರುತ್ತದೆ. ಆದರೆ ಇಂದು ನಾವು ಕೆಲವೊಂದು ರೋಗಗಳಿಗೆ ತೆಗೆದುಕೊಳ್ಳುವ ಮಾತ್ರೆಗಳಿಂದಲೇ ನಮಗೆ ಮಧುಮೇಹ ಬರುತ್ತಿದೆ.

ಡಾ ಬಿಎಂ ಹೆಗ್ಡೆಯವರು ಒಮ್ಮೆ ಹೀಗೆ ಹೇಳಿದ್ದರು. ಡಯಾಬಿಟಿಸ್ ಎನ್ನುವುದು ಒಂದು ಹೊಸ ಖಾಯಿಲೆ ಅಲ್ಲ. ನಾವು ವೈದ್ಯರು ನೋಡುವ ಕೆಲವು ಮಾತ್ರೆಗಳಿಂದಲೇ ಡಯಾಬಿಟಿಸ್ ಬರುವ ಸಾಧ್ಯತೆಯಿದೆ. ಕೊಲೆಸ್ಟ್ರಾಲ್ ಅಂಶ ಕಡಿಮೆಗೊಳಿಸುವ ಒಂದು ಗುಳಿಗೆಯಿಂದಲೂ ನಿಮಗೆ ಮಧುಮೇಹ ಬರುವ ಸಾಧ್ಯತೆ ಶೇ.40 ರಷ್ಟಿರುತ್ತದೆ.

ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಒಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅವರು ಆಹಾರದ ನಂತರ ಶುಗರ್ ಲೆವೆಲ್ 190 ಇದ್ದರೆ ನಿಗದಿತವಾಗಿ ಮಾತ್ರೆ ತೆಗೆದುಕೊಳ್ಳಬೇಕೇ ಎಂಬ ಅನುಮಾನಕ್ಕೆ ಈ ರೀತಿ ಹೇಳಿದ್ದರು. 190 ಎನ್ನುವುದು ಗಂಭೀರವಲ್ಲ. 200 ರೊಳಗೆ ನಾರ್ಮಲ್ ಎಂದೇ ಅರ್ಥ. ಹೀಗಾಗಿ ನೀವು ಚಿಂತಿತರಾಗಬೇಕಿಲ್ಲ.  ನಿಮ್ಮ ಆಹಾರ ಶೈಲಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ವ್ಯಾಯಾಮ ಮಾಡಿ, ಒಳ್ಳೆಯ ಆಲೋಚನೆ ಮಾಡಿ, ಇತರರಿಗೆ ಸಹಾಯ ಮಾಡಿ, ಮಧುಮೇಹವನ್ನು ನೀವಾಗಿಯೇ ಜೀವನ ಶೈಲಿಯಿಂದಲೇ ನಿಯಂತ್ರಿಸಬಹುದು ಎಂದು ಅವರು ಹೇಳಿದ್ದರು.

ನೆನಪಿರಲಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ನಿಮ್ಮ ತಜ್ಞ ವೈದ್ಯರ ಸಲಹೆ ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಸುಜಾತ ಭಟ್ ಉಲ್ಟಾ ಹೊಡೆಯುತ್ತಿದ್ದಂತೇ ಶಾಕಿಂಗ್ ಹೇಳಿಕೆ ನೀಡಿದ ಗಿರೀಶ್ ಮಟ್ಟೆಣ್ಣನವರ್