Select Your Language

Notifications

webdunia
webdunia
webdunia
webdunia

ಮತಪರಿಷ್ಕರಣೆ ಯಾಕೆ ಮುಖ್ಯ ಎನ್ನುವುದಕ್ಕೆ ಬಿಹಾರದ ಈ ಘಟನೆಯೇ ಸಾಕ್ಷಿ

Voting

Krishnaveni K

ನವದೆಹಲಿ , ಸೋಮವಾರ, 25 ಆಗಸ್ಟ್ 2025 (10:14 IST)
ನವದೆಹಲಿ: ಒಂದೆಡೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಬಿಹಾರದಲ್ಲಿ ಮತಪರಿಷ್ಕರಣೆ ವಿರೋಧ ಮಾಡುತ್ತಿದೆ. ಆದರೆ ಮತಪರಿಷ್ಕರಣೆ ಎಷ್ಟು ಮುಖ್ಯ ಎನ್ನುವುದಕ್ಕೆ ಬಿಹಾರದ ಈ ಘಟನೆಯೇ ಸಾಕ್ಷಿಯಾಗಿದೆ.

ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಮತಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ. ಆದರೆ ಇದನ್ನು ಇಂಡಿಯಾ ಒಕ್ಕೂಟ ವಿರೋಧಿಸುತ್ತಿದೆ. ಈಗಾಗಲೇ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬಿಹಾರದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಮತಪರಿಷ್ಕರಣೆ ವಿರುದ್ಧ ಹೋರಾಡುತ್ತಿದ್ದಾರೆ.

ಆದರೆ ಮತಪರಿಷ್ಕರಣೆ ಮಾಡಿದ ಕಾರಣಕ್ಕೆ ಬಿಹಾರದಲ್ಲಿ ಈಗ ಅಕ್ರಮ ಮತದಾರರು ಬಯಲಿಗೆ ಬರುತ್ತಿದ್ದಾರೆ. ಇದೀಗ ಮತಪಟ್ಟಿಯಲ್ಲಿ ಇಬ್ಬರು ಪಾಕಿಸ್ತಾನಿಯರು ಪತ್ತೆಯಾಗಿದ್ದಾರೆ. ಇಬ್ಬರು ಪಾಕ್ ಮಹಿಳೆಯರ ಹೆಸರುಗಳು ಪತ್ತೆಯಾಗಿರುವುದು ಆಘಾತಕಾರೀ ಅಂಶವಾಗಿದೆ. ಈ ಬಗ್ಗೆ ತನಿಖೆ ಶುರುವಾಗಿದೆ.

1956 ರಲ್ಲಿ ಭಾರತಕ್ಕೆ ಬಂದಿದ್ದ ಮಹಿಳೆಯರು ಭಾರತದ ಮತಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದರು. ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲೇ ಉಳಿದುಕೊಂಡಿದ್ದ ಪಾಕ್ ನಾಗರಿಕರ ಬಗ್ಗೆ ತನಿಖೆ ನಡೆಸುವಾಗ ಈ ಮಹಿಳೆಯರ ಹೆಸರುಗಳೂ ಪತ್ತೆಯಾಗಿವೆ.

ಒಂದೆಡೆ ಮತಪರಿಷ್ಕರಣೆ ಯಾಕೆ ಅಗತ್ಯ ಎನ್ನುವುದನ್ನು ಇದು ಸಾಬೀತುಪಡಿಸುತ್ತದೆ. ಇನ್ನೊಂದೆಡೆ ಇಷ್ಟು ದಿನ ಇವರು ಮತಪಟ್ಟಿಯಲ್ಲಿದ್ದರೂ ಚುನಾವಣಾ ಆಯೋಗದ ಗಮನಕ್ಕೆ ಬಾರದೇ ಇರುವುದೂ ಟೀಕೆಗೆ ಗುರಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Dharmasthala: ಚಿನ್ನಯ್ಯ ತಂದಿದ್ದ ಬುರುಡೆ ಹಿಂದಿದೆ ರೋಚಕ ಕಹಾನಿ