Select Your Language

Notifications

webdunia
webdunia
webdunia
webdunia

ಸಂಜೆ ಹೊತ್ತು ಯಾಕೆ ಉಗುರು ಕಟ್ ಮಾಡಬಾರದು ಗೊತ್ತಾ, ಅಸಲಿ ಕಾರಣ ಇಲ್ಲಿದೆ

superstition against cutting nails
p
ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಉಗುರನ್ನು ಕತ್ತರಿಸಬಾರದೆಂದು ಮನೆಯಲ್ಲಿನ ಹಿರಿಯವರು ಹೇಳುತ್ತಾರೆ.  ಇನ್ನೂ ಇದರ ಹಿಂದೆ ಧಾರ್ಮಿಕ ಮತ್ತು ವೈಜ್ಞಾನಿಕ ಎಂಬ ಎರಡು ಮಗ್ಗಲುಗಳಿವೆ. ಅದರ ವಿವರ ಇಲ್ಲಿದೆ:

1. ವೈಜ್ಞಾನಿಕ ಮತ್ತು ಪ್ರಾಯೋಗಿಕ ಕಾರಣ

ಹಳೆಯ ಕಾಲದಲ್ಲಿ ಈಗಿನಂತೆ ವಿದ್ಯುತ್ ದೀಪಗಳ ಸೌಲಭ್ಯ ಇರಲಿಲ್ಲ. ಕತ್ತಲೆಯಲ್ಲಿ ಅಥವಾ ಮಂದ ಬೆಳಕಿನಲ್ಲಿ ಉಗುರು ಕತ್ತರಿಸುವಾಗ ಈ ಕೆಳಗಿನ ತೊಂದರೆಗಳಾಗುವ ಸಾಧ್ಯತೆ ಇತ್ತು. 

    ಗಾಯವಾಗುವ ಭಯ: ಬೆಳಕು ಸರಿಯಾಗಿ ಇಲ್ಲದಿದ್ದಾಗ ಚರ್ಮ ಕತ್ತರಿಸಿ ಗಾಯವಾಗುವ ಸಾಧ್ಯತೆಯಿದೆ. ಈ ಸಂಬಂಧನೂ ಉಗುರನ್ನು ಕಟ್ ಮಾಡಬಾರದೆಂದು ಹೇಳಲಾಗುತ್ತದೆ. 

    ನೈರ್ಮಲ್ಯದ ಕೊರತೆ: ಕತ್ತರಿಸಿದ ಉಗುರುಗಳು ಎಲ್ಲಿ ಬಿದ್ದಿವೆ ಎಂದು ತಿಳಿಯುತ್ತಿರಲಿಲ್ಲ. ಅವು ಆಹಾರದಲ್ಲಿ ಅಥವಾ ಬಟ್ಟೆಯಲ್ಲಿ ಸಿಲುಕಿಕೊಂಡು ಸೋಂಕು ಉಂಟುಮಾಡುವ ಸಾಧ್ಯತೆ ಇರುತ್ತಿತ್ತು.

ಧಾರ್ಮಿಕ ಮತ್ತು ಸಾಂಪ್ರದಾಯಿಕ ನಂಬಿಕೆ

    ಲಕ್ಷ್ಮಿ ದೇವಿಯ ಆಗಮನ: ಸಂಜೆ ಹೊತ್ತು ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುವ ಸಮಯ ಎಂದು ನಂಬಲಾಗುತ್ತದೆ. ಈ ಸಮಯದಲ್ಲಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಉಗುರು ಕತ್ತರಿಸುವುದು ಅಶುದ್ಧ ಕೆಲಸವೆಂದು ಪರಿಗಣಿಸಲಾಗುತ್ತಿತ್ತು.

    ದಟ್ಟ ದರಿದ್ರ: ಸಂಜೆ ಹೊತ್ತು ಮನೆಯಲ್ಲಿ ಕಸ (ಉಗುರು) ಎಸೆಯುವುದು ದಾರಿದ್ರ್ಯಕ್ಕೆ ದಾರಿ ಎಂಬ ನಂಬಿಕೆ ರೂಢಿಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಮಸ್ವರೂಪಿ ಹಿಮಪಾತಕ್ಕೆ ಬೆಚ್ಚಿದ ಅಮೆರಿಕ: ತುರ್ತು ಪರಿಸ್ಥಿತಿ ಘೋಷಣೆ, ‌ಜನಜೀವನ ಅಸ್ತವ್ಯಸ್ತ