Select Your Language

Notifications

webdunia
webdunia
webdunia
webdunia

ಆಟದಲ್ಲಿ ಸೋಲು ಗೆಲುವು ಸಾಮಾನ್ಯ, ಹಾರ್ದಿಕ್‌ನನ್ನು ಗೇಲಿ ಮಾಡುವುದು ಸರಿಯಲ್ಲ: ಗಂಗೂಲಿ

Hardik Pandya

Sampriya

ಮುಂಬೈ: , ಶನಿವಾರ, 6 ಏಪ್ರಿಲ್ 2024 (17:22 IST)
Photo Courtesy X
ಮುಂಬೈ: ಈ ಬಾರಿಯ ಐಪಿಎಲ್‌ ಆವೃತ್ತಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೋಲ್‌ ಮಾಡಲಾಗುತ್ತಿದೆ. ಇದರ ಬೆನಲ್ಲೇ  ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಹಾರ್ದಿಕ್ ಪಾಂಡ್ಯ ಪರ ಮಾತನಾಡಿ, ಅಭಿಮಾನಿಗಳು ಅವರನ್ನು ಗೇಲಿ ಮಾಡಬಾರದು ಎಂದು ಹೇಳಿದ್ದಾರೆ.

ಇಂದು ವಾಂಖೆಡೆ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ತರಬೇತಿ ಅವಧಿಯ ವೇಳೆ ಈ ಕುರಿತು ಪ್ರತಿಕ್ರಿಯಿಸಿದ ಗಂಗೂಲಿ, ಅವರು ಮುಂಬೈ ತಂಡದ ನಾಯಕರಾಗಿ ಹಾರ್ದಿಕ್ ಅವರನ್ನು ಆಯ್ಕೆಮಾಡಿದ್ದು ಅವರ ತಪ್ಪಲ್ಲ. ಆಟದಲ್ಲಿ ಸೋಲು ಗೆಲುವು ಸಾಮಾನ್ಯ. ಅವರನ್ನು ಗೇಲಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಇನ್ನೂ ರೋಹಿತ್ ಶರ್ಮಾ ಅವರು ವಿಭಿನ್ನ ಮಟ್ಟದ ನಾಯಕ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅವರ ನಾಯಕತ್ವ ಭಾರತದ ತಂಡದಲ್ಲೂ ಅತ್ಯುತ್ತಮವಾಗಿದೆ ಎಂದರು.

ಈ ಬಾರಿಯ ಐಪಿಎಲ್‌ ಆವೃತ್ತಿಯ ಮುಂಬೈ ತಂಡಕ್ಕೆ ನಾಯಕನಾಗಿ ಹಾರ್ದಿಕ್ ಪಾಂಡ್ಯ ಅವರನ್ನು ನೇಮಕ ಮಾಡಿತು. ಇದು ರೋಹಿತ್ ಶರ್ಮಾ ಅವರ ಅಭಿಮಾನಿಗಳ ಅಸಮಾಧನಕ್ಕೆ ಕಾರಣವಾಗಿದೆ. ಅದಲ್ಲದೆ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಮುಂಬೈ ಹ್ಯಾಟ್ರಿಕ್ ಸೋಲನ್ನು ಅನುಭವಿಸುತ್ತಲೇ ಬಂದಿದೆ.  ಇದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಇನ್ನೂ ಸತತ ಸೋಲಿನಿಂದ ಹೊರ ಬರಲು ಹಾರ್ದಿಕ್ ಪಾಂಡ್ಯ ಗುಜರತ್‌ನ ಸೋಮನಾಥ ದೇವರ ದರ್ಶನವನ್ನು ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಗಿಂತ, ಉದ್ಯೋಗಸ್ಥ ತಾಯಿಯಾಗಿರುವುದಕ್ಕೆ ಖುಷಿಪಡುತ್ತೇನೆ, ಸಾನಿಯಾ ಮಿರ್ಜಾ