Select Your Language

Notifications

webdunia
webdunia
webdunia
webdunia

ತಾಯಿಗಿಂತ, ಉದ್ಯೋಗಸ್ಥ ತಾಯಿಯಾಗಿರುವುದಕ್ಕೆ ಖುಷಿಪಡುತ್ತೇನೆ, ಸಾನಿಯಾ ಮಿರ್ಜಾ

Tennis Player Sania Mirza

Sampriya

ನವದೆಹಲಿ , ಶನಿವಾರ, 6 ಏಪ್ರಿಲ್ 2024 (15:36 IST)
Photo Courtesy X
ನವದೆಹಲಿ:  ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾರ್ಗದರ್ಶಕಿ  ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ತೊಡಗಿಸಿಕೊಂಡಿರುವ ಬ್ಯಾಡ್ಮಿಂಟನ್ ತಾರೆ ಸಾನಿಯಾ ಮಿರ್ಜಾ ಅವರು ತಾಯಿಯಾದವಳು ವೈಯ್ಯಕ್ತಿಕ ಬದುಕು ಹಾಗೂ ವೃತ್ತಿ ಬದುಕಿನ ಸಮತೋಲದ ಬಗ್ಗೆ ಹೇಳಿಕೊಒಂಡಿದ್ದಾರೆ.

ಮಾಧ್ಯಮದ ಜತೆ ಮಾತನಾಡಿದ ಅವರು, ನಾನು ತಾಯಿಯಾಗಿರುವುದಕ್ಕೆ ಇಷ್ಟ ಪಡುತ್ತೇನೆ, ಆದರೆ ಅದಕ್ಕಿಂತ ಹೆಚ್ಚು ಉದ್ಯೋಗ ನಿರತ ತಾಯಿಯಾಗಿರುವುದಕ್ಕೆ ತುಂಬಾ ಖುಷಿ ಪಡುತ್ತೇನೆ ಎಂದರು.

ತಾನು ಕೆಲಸಕ್ಕಾಗಿ ಪ್ರಯಾಣಿಸಿದಾಗಲೆಲ್ಲಾ ತನ್ನ ಮಗುವನ್ನು ತನ್ನ ತಾಯಿ ನೋಡಿಕೊಳ್ಳುತ್ತಾಳೆ ಆದರೆ ನನಗೆ ತಾಯಿಯಾಗಿ ನಾನು ಅವನೊಂದಿಗೆ ಇಲ್ಲವೆಂಬ ನೋವು ಕಾಡುತ್ತಲೇ ಇರುತ್ತದೆ. ತಾಯಿಯಾಗಿರುವುದು ನನ್ನ ಜೀವನದ ಶ್ರೇಷ್ಠ ಗೌರವಗಳು ಮತ್ತು ಸಂತೋಷಗಳಲ್ಲಿ ಒಂದಾಗಿದೆ. ಆದರೆ ಅದು ಸುಲಭದ ಮಾತಲ್ಲ ಎಂದರು.

ಆದ್ದರಿಂದ ನನ್ನ ವೃತ್ತಿ ಬದುಕನ್ನು ಹಾಗೂ ವೈಯ್ಯಕ್ತಿಕ ಬದುಕನ್ನು ಸಮತೋಲನದಲ್ಲಿಡಲು ಪ್ರಯತ್ನಿಸುತ್ತೇನೆ. ಕೆಲವೊಂದು ಬಾರಿ ಅದು ಸವಾಲಾಗಿ ಕಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳು ಮಲಗಿದ್ದಾಳೆ, ಸೈಲೆಂಟಾಗಿರಿ ಎಂದ ರೋಹಿತ್ ಶರ್ಮಾ