Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಉಮೇಶ್ ಯಾದವ್

Umesh Yadav

Krishnaveni K

ಲಕ್ನೋ , ಶನಿವಾರ, 6 ಏಪ್ರಿಲ್ 2024 (10:13 IST)
Photo Courtesy: Umesh Yadav X page
ಲಕ್ನೋ: ಗುಜರಾತ್ ತಂಡದ ಪರ ಐಪಿಎಲ್ ಆಡುತ್ತಿರುವ ಹಿರಿಯ ವೇಗಿ ಉಮೇಶ್ ಯಾದವ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಹೊಸ ಇತಿಹಾಸವೊಂದನ್ನು ಸೃಷ್ಟಿಸಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಉಮೇಶ್ ಯಾದವ್ 3 ಓವರ್ ಗಳಲ್ಲಿ 35 ರನ್ ನೀಡಿ 1 ವಿಕೆಟ್ ಕಬಳಿಸಿದ್ದರು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ಪರ ಅತ್ಯಧಿಕ ವಿಕೆಟ್ ಕಬಳಿಸಿದ ದಾಖಲೆ ಮಾಡಿದರು. ಇದಕ್ಕೆ ಮೊದಲು ಈ ದಾಖಲೆ ವೆಸ್ಟ್ ಇಂಡೀಸ್ ಮೂಲದ ವೇಗಿ ಡ್ವಾನ್ ಬ್ರಾವೊ ಹೆಸರಿನಲ್ಲಿತ್ತು.

ಉಮೇಶ್ ಯಾದವ್ ಆರ್ ಸಿಬಿ, ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟನ್ಸ್ ಪರ ಆಡಿದ್ದಾರೆ. ಈ ವೇಳೆ ಒಟ್ಟು 144 ಇನಿಂಗ್ಸ್ ಗಳಲ್ಲಿ ಬೌಲಿಂಗ್ ನಡೆಸಿ 34 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಐಪಿಎಲ್ ನಲ್ಲಿ ಒಂದೇ ತಂಡದ ಪರ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಮಾಡಿದರು.

ಇದಕ್ಕೆ ಮೊದಲು ಡ್ವಾನ್ ಬ್ರಾವೊ ಮುಂಬೈ ಇಂಡಿಯನ್ಸ್, ಸಿಎಸ್ ಕೆ ಮತ್ತು ಗುಜರಾತ್ ಲಯನ್ಸ್ ಪರ ಆಡಿ 158 ಇನಿಂಗ್ಸ್ ಗಳಿಂದ 33 ವಿಕೆಟ್ ಕಬಳಿಸಿದ್ದರು. ಡ್ವಾನ್ ಬ್ರಾವೊಗೆ ಹೋಲಿಸಿದರೆ ಉಮೇಶ್ ಯಾದವ್ ಇನ್ನಷ್ಟು ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2024: ಸಿಎಸ್ ಕೆಗೆ ಸತತ ಎರಡನೇ ಸೋಲು, ಹೈದರಾಬಾದ್ ಸೋಲು