Publish Date: Sat, 06 Apr 2024 (12:02 IST)
Updated Date: Sat, 06 Apr 2024 (12:07 IST)
ಮುಂಬೈ: ಟೀಂ ಇಂಡಿಯಾ ನಾಯಕ, ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ರೋಹಿತ್ ಶರ್ಮಾ ಒಬ್ಬ ಒಳ್ಳೆಯ ತಂದೆ ಕೂಡಾ ಎಂದು ಅನೇಕ ಬಾರಿ ನಿರೂಪಿಸಿದ್ದಾರೆ.
ರೋಹಿತ್ ಶರ್ಮಾ ಮತ್ತು ಮಗಳು ಸಮೈರಾ ಬಾಂಡಿಂಗ್ ಎಲ್ಲರಿಗೂ ಗೊತ್ತು. ಆಗಾಗ್ಗೆ ರೋಹಿತ್ ತಮ್ಮ ಮಗಳ ಜೊತೆಗಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುತ್ತಲೇ ಇರುತ್ತಾರೆ. ರೋಹಿತ್ ತಮ್ಮ ಮಗಳ ಜೊತೆಗಿನ ಅನೇಕ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದೀಗ ರೋಹಿತ್ ತಮ್ಮ ಮಗಳಿಗಾಗಿ ಅಭಿಮಾನಿಗಳಿಗೆ ಸೈಲೆಂಟ್ ಆಗಿರಿ ಎಂದು ಸನ್ನೆ ಮಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪತ್ನಿ ರಿತಿಕಾ ಸಜ್ ದೇ ಜೊತೆಗೆ ರೋಹಿತ್ ಏರ್ ಪೋರ್ಟ್ ನಿಂದ ಕಾರಿನತ್ತ ತೆರಳುವಾಗಿ ಸಹಜವಾಗಿಯೇ ಅಭಿಮಾನಿಗಳು, ಪಪ್ಪಾರಾಜಿಗಳು ರೋಹಿತ್ ಹೆಸರೆತ್ತಿ ಕೂಗಿದ್ದಾರೆ.
ಈ ವೇಳೆ ರೋಹಿತ್ ತಮ್ಮ ನಿದ್ರೆಯ ಮಂಪರಿನಲ್ಲಿದ್ದ ಪುತ್ರಿ ಸಮೈರಾರನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದರು. ಮಗಳು ಮಲಗಿದ್ದ ಕಾರಣಕ್ಕೆ ಜನ ಕೂಗಾಡಿದರೆ ಅವಳಿಗೆ ಎಚ್ಚರವಾಗುತ್ತದೆ ಎಂಬ ಕಾರಣಕ್ಕೆ ರೋಹಿತ್ ಸುಮ್ಮನಿರುವಂತೇ ಬೆರಳಿನಿಂದಲೇ ಸನ್ನೆ ಮಾಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ರೋಹಿತ್ ಬೆಸ್ಟ್ ಅಪ್ಪ ಎಂದು ಹೊಗಳಿದ್ದಾರೆ.