Publish Date: Tue, 02 Apr 2024 (11:04 IST)
Updated Date: Tue, 02 Apr 2024 (11:08 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೆಣಸಾಡಲಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದೆ. ಕೆಎಲ್ ರಾಹುಲ್ ಗೆ ಇದು ಕ್ರಿಕೆಟ್ ಕಲಿಸಿದ ಜಾಗ. ಇಲ್ಲಿ ಬಾಲ್ಯದಿಂದ ಕ್ರಿಕೆಟ್ ಆಡಿದ ಅನುಭವಿದೆ. ಹೀಗಾಗಿ ರಾಹುಲ್ ಗೆ ಇದು ತವರಿನ ಅಂಕಣ. ಇಂದಿನ ಪಂದ್ಯಕ್ಕೆ ಆರ್ ಸಿಬಿ ಜೊತೆಗೆ ಕೆಎಲ್ ರಾಹುಲ್ ರನ್ನು ಬೆಂಬಲಿಸಲು ಜನ ಮೈದಾನಕ್ಕೆ ಬರಲಿದ್ದಾರೆ.
ಈ ಪಂದ್ಯಕ್ಕೆ ಮೊದಲು ರಾಹುಲ್ ನೀಡಿರುವ ಪ್ರೋಮೋ ಒಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಐ ಲವ್ ಯೂ ಗೆಳೆಯರೇ. ಆದರೆ ಬೆಂಗಳೂರು ವಿರುದ್ಧ ಆಡುವಾಗ ಎರಡೂ ತಂಡಗಳೂ ಸಮಾನ ಎನ್ನುತ್ತಾರೆ. ರಾಹುಲ್ ಈ ಪ್ರೋಮೋ ಎಲ್ಲರ ಗಮನೆಳೆಯುವಂತಿದೆ.
ಕೆಎಲ್ ರಾಹುಲ್ ಇತ್ತೀಚೆಗೆ ಐಪಿಎಲ್ ಪ್ರೋಮೋ ಶೂಟ್ ವೇಳೆ ಕನ್ನಡ್ ಎಂದ ಸಹಾಯಕ ನಿರ್ದೇಶಕನನ್ನು ಕನ್ನಡ್ ಅಲ್ಲ ಕನ್ನಡ ಎಂದು ಹೇಳು ಎಂದು ತಿದ್ದಿದ ವಿಡಿಯೋ ವೈರಲ್ ಆಗಿತ್ತು. ಆದರೆ ಐಪಿಎಲ್ ನಲ್ಲಿ ಅವರು ಬೆಂಗಳೂರು ತಂಡವನ್ನು ಬಿಟ್ಟು ಬೇರೆ ತಂಡವನ್ನು ಪ್ರತಿನಿಧಿಸುತ್ತಾರೆ ಎಂಬ ಬೇಸರ ಅಭಿಮಾನಿಗಳಿಗಿದೆ.