ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೀಂ ಇಂಡಿಯಾಕ್ಕೆ ಬಂದ ಹೊಸದರಲ್ಲಿ ನಡೆದ ಘಟನೆಯೊಂದನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಮೊದಲ ಬಾರಿಗೆ ವಿರಾಟ್ ತಂಡಕ್ಕೆ ಬಂದಾಗ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಮತ್ತು ಮುನಾಫ್ ಪಟೇಲ್ ಕೊಹ್ಲಿಯನ್ನು ಫೂಲ್ ಮಾಡಿದ್ದರಂತೆ. ತಂಡಕ್ಕೆ ಯಾರೇ ಹೊಸ ಆಟಗಾರರು ಬಂದರೂ ಮೊದಲು ಸಚಿನ್ ಕಾಲಿಗೆ ನಮಸ್ಕರಿಸಬೇಕು ಎಂದು ಪೂಲ್ ಮಾಡಿದ್ದರಂತೆ.
ಇದನ್ನು ನಂಬಿದ ಕೊಹ್ಲಿ ನೇರವಾಗಿ ಹೋಗಿ ಸಚಿನ್ ಕಾಲಿಗೆ ನಮಸ್ಕರಿಸಿದ್ದರಂತೆ. ಇದರಿಂದ ಕಕ್ಕಾಬಿಕ್ಕಿಯಾದ ಸಚಿನ್ ಯಾಕೆ ಹೀಗೆಲ್ಲಾ ಮಾಡ್ತಿದ್ದೀಯಾ? ಇದೆಲ್ಲಾ ಬೇಕಾಗಿಲ್ಲ ಎಂದರಂತೆ. ಆಗ ಪಕ್ಕದಲ್ಲೇ ಇದ್ದ ಭಜಿ,ಯುವಿ ನಗುತ್ತಾ ನಿಂತಿದ್ದರು. ಆಗಲೇ ಕೊಹ್ಲಿಗೆ ತಾವು ಫೂಲ್ ಆಗಿರುವುದು ತಿಳಿಯಿತು ಎಂದು ಸಚಿನ್ ಹೇಳಿದ್ದಾರೆ. ಇದಕ್ಕೂ ಮೊದಲು ಕೊಹ್ಲಿ ಕೂಡಾ ಈ ಘಟನೆಯನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!