Publish Date: Wed, 17 Oct 2018 (07:35 IST)
Updated Date: Wed, 17 Oct 2018 (07:38 IST)
ಮುಂಬೈ: ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತಿರುವ ವೆಸ್ಟ್ ಇಂಡೀಸ್ ಗೆ ಇದೀಗ ಕೋಚ್ ಸ್ಟುವರ್ಟ್ ಲಾ ರೂಪದಲ್ಲಿ ಆಘಾತ ಸಿಕ್ಕಿದೆ.
ಹೈದರಾಬಾದ್ ಟೆಸ್ಟ್ ಪಂದ್ಯದ ವೇಳೆ ವಿಂಡೀಸ್ ವಿರುದ್ಧದ ಅಂಪಾಯರ್ ತೀರ್ಪು ಪ್ರಶ್ನಿಸಿ ಸ್ಟುವರ್ಟ್ ಟಿವಿ ಅಂಪಾಯರ್ ಜತೆ ಮಿತಿ ಮೀರಿ ವರ್ತಿಸಿದ್ದಕ್ಕೆ ಐಸಿಸಿ ನಿಯಮದ ಅನುಸಾರ ಅಮಾನತು ಶಿಕ್ಷೆ ವಿಧಿಸಲಾಗಿದೆ.
ಕಿರನ್ ಪಾವೆಲ್ ಗೆ ಔಟ್ ನೀಡಿದ್ದನ್ನು ಪ್ರಶ್ನಿಸಿ ಸ್ಟುವರ್ಟ್ ಲಾ ನೇರವಾಗಿ ಟಿವಿ ಅಂಪಾಯರ್ ಕೊಠಡಿಗೆ ತೆರಳಿ ಅವಾಚ್ಯವಾಗಿ ನಿಂದಿಸಿದ್ದರು ಎಂದು ಅವರ ಮೇಲೆ ಆರೋಪ ಕೇಳಿಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.