Publish Date: Mon, 15 Oct 2018 (08:00 IST)
Updated Date: Mon, 15 Oct 2018 (08:02 IST)
ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ವಿಂಡೀಸ್ ಕಳಪೆ ಬ್ಯಾಟಿಂಗ್ ಮಾಡಿ ಪಂದ್ಯವನ್ನು ನೀರಸಗೊಳಿಸಿತ್ತು.
ಇದರಿಂದಾಗಿ ಮೈದಾನದಲ್ಲಿದ್ದ ಪ್ರೇಕ್ಷಕರು ಅಕ್ಷರಶಃ ನಿದ್ರೆಯ ಮೂಡ್ ಗೆ ಜಾರಿದ್ದರು. ಮೂರನೇ ದಿನದಾಟದ ಸುಡು ಮಧ್ಯಾಹ್ನದ ವೇಳೆ ಪ್ರೇಕ್ಷಕರು ಈ ರೀತಿ ಆಸಕ್ತಿಯಲ್ಲದೇ ಕುಳಿತಿದ್ದು ನಾಯಕ ವಿರಾಟ್ ಕೊಹ್ಲಿಗೆ ಇಷ್ಟವಾಗಲಿಲ್ಲ.
ಹೀಗಾಗಿ ಅವರು ಚಪ್ಪಾಳೆ ತಟ್ಟಿ ಪ್ರೇಕ್ಷಕರ ಕಡೆಗೆ ಹೆಚ್ಚು ಸದ್ದು ಮಾಡುವಂತೆ ಸನ್ನೆ ಮಾಡಿದರು. ಜೋರಾಗಿ ಕೂಗುವಂತೆ ಅವರು ಸನ್ನೆ ಮಾಡುತ್ತಿದ್ದಂತೆ ನಿದ್ರೆಯಿಂದ ಎಚ್ಚೆತ್ತ ಪ್ರೇಕ್ಷಕರು ಜೋರಾಗಿ ಕೂಗಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.