Select Your Language

Notifications

webdunia
webdunia
webdunia
webdunia

ಶಬ್ನಂ ಗಿಲ್ ರನ್ನು ಅವರ ಪಾಡಿಗೆ ಬಿಟ್ಟು ಬಿಡಿ: ವಾಸಿಂ ಜಾಫರ್

ಶಬ್ನಂ ಗಿಲ್ ರನ್ನು ಅವರ ಪಾಡಿಗೆ ಬಿಟ್ಟು ಬಿಡಿ: ವಾಸಿಂ ಜಾಫರ್
ಮುಂಬೈ , ಬುಧವಾರ, 30 ಡಿಸೆಂಬರ್ 2020 (10:10 IST)
ಮುಂಬೈ: ಟೀಂ ಇಂಡಿಯಾದಲ್ಲಿ ಯಾವುದೇ ಯುವ ಆಟಗಾರ ಮಿಂಚಿದರೂ ಸಾಕು, ಆತನನ್ನು ದಿಗ್ಗಜ ಕ್ರಿಕೆಟಿಗರಿಗೆ ಹೋಲಿಸಿ ಬೆಟ್ಟದಷ್ಟು ನಿರೀಕ್ಷೆಯ ಭಾರ ಹೊರಿಸಲಾಗುತ್ತದೆ. ಆದರೆ ಶಬ್ನಂ ಗಿಲ್ ವಿಚಾರದಲ್ಲಿ ಹೀಗೆ ಮಾಡಬೇಡಿ ಎಂದು ಹಿರಿಯ ಕ್ರಿಕೆಟಿಗ ವಾಸಿಂ ಜಾಫರ್ ಮನವಿ ಮಾಡಿದ್ದಾರೆ.


ಶಬ್ನಂ ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ್ದೇ ತಡ ಅವರನ್ನು ಸೆಹ್ವಾಗ್, ಸಚಿನ್ ಎಂದೆಲ್ಲಾ ಹೋಲಿಕೆ ಮಾಡಲಾಗುತ್ತಿದೆ. ಆದರೆ ಶಬ್ನಂ ವಿಶೇಷ ಆಟಗಾರ. ಆದರೆ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ. ಈಗಾಗಲೇ ನಮ್ಮಲ್ಲಿ ದಿಗ್ಗಜ ಕ್ರಿಕೆಟಿಗರಿಗೆ ಹೋಲಿಸಿ ಎಷ್ಟೋ ಯುವ ಕ್ರಿಕೆಟಿಗರ ವೃತ್ತಿ ಜೀವನವೇ ಹಾಳಾಗಿದೆ. ಶಬ್ನಂಗೂ ಹಾಗೆ ಮಾಡಬೇಡಿ ಎಂದು ಜಾಫರ್ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ವಿರುದ್ಧ ಸೋಲಿನ ಮೇಲೆ ಆಸೀಸ್ ಗೆ ದಂಡದ ಬರೆ