Publish Date: Wed, 30 Dec 2020 (09:52 IST)
Updated Date: Wed, 30 Dec 2020 (09:54 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯವನ್ನು ಸೋತ ಬಳಿಕ ಆಸ್ಟ್ರೇಲಿಯಾಗೆ ದಂಡದ ಬರೆ ಸಿಕ್ಕಿದೆ.
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿಯ ಓವರ್ ಮಾಡಿದ್ದಕ್ಕೆ ಆಸೀಸ್ ನಾಯಕ ಟಿಮ್ ಪೇಯ್ನ್ ಗೆ ಪಂದ್ಯದ ಸಂಭಾವನೆ ಶೇ. 40 ರಷ್ಟು ಮತ್ತು ಇತರ ಆಟಗಾರರಿಗೆ ಶೇ. 20 ರಷ್ಟು ಸಂಭಾವನೆ ಕಡಿತದ ದಂಡ ವಿಧಿಸಲಾಗಿದೆ. ಆಸ್ಟ್ರೇಲಿಯಾ ನಾಯಕ ತಪ್ಪೊಪ್ಪಿಕೊಂಡಿರುವುದರಿಂದ ಯಾವುದೇ ವಿಚಾರಣೆಯಿಲ್ಲದೇ ದಂಡ ವಿಧಿಸಿ ಇತ್ಯರ್ಥಗೊಳಿಸಲಾಗಿದೆ.