ಮುಂಬೈ: ಇನ್ ಸ್ಟಾಗ್ರಾಂ ಪೋಸ್ಟ್ ಮೂಲಕ ಗಳಿಕೆ ಮಾಡುವ ಸೆಲೆಬ್ರಿಟಿಗಳ ಪೈಕಿ ವಿಶ್ವಕ್ಕೆ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ನಂ.1 ಆಗಿದ್ದರೆ, ಭಾರತಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಆಗಿ ಹೊರಹೊಮ್ಮಿದ್ದಾರೆ.
ರೊನಾಲ್ಡೋ ಒಂದು ಸ್ಪಾನ್ಸರ್ಡ್ ಇನ್ ಸ್ಟಾಗ್ರಾಂ ಪೋಸ್ಟ್ ಪ್ರಕಟಿಸಲು 1.6 ಮಿಲಿಯನ್ ಡಾಲರ್ ಚಾರ್ಜ್ ಮಾಡುತ್ತಾರಂತೆ. ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇನ್ನೊಬ್ಬ ಖ್ಯಾತ ಫುಟ್ಬಾಲಿಗ ಲಿಯಾನೆಲ್ ಮೆಸ್ಸಿ ಇದ್ದಾರೆ.
ಇನ್ನು, ಭಾರತೀಯರ ಪೈಕಿ ವಿರಾಟ್ ಕೊಹ್ಲಿ ನಂ.1 ಆಗಿದ್ದಾರೆ. ಕೊಹ್ಲಿ ಒಂದು ಪೋಸ್ಟ್ ಗೆ 0.680 ಮಿಲಿಯನ್ ಡಾಲರ್ ನಷ್ಟು ಗಳಿಕೆ ಮಾಡುತ್ತಾರೆ. ಟಾಪ್ 20 ರೊಳಗೆ ಸ್ಥಾನ ಪಡೆದ ಏಕೈಕ ಭಾರತೀಯ ಕೊಹ್ಲಿ. ಜಾಗತಿಕವಾಗಿ ಕ್ರೀಡಾಳುಗಳ ಪೈಕಿ ಕೊಹ್ಲಿಗೆ ನಾಲ್ಕನೇ ಸ್ಥಾನ.