ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಗಾಯವಾಗಿದ್ದರೂ ಆರಂಭಿಕ ಶುಬ್ನಂ ಗಿಲ್ ರನ್ನು ಕಣಕ್ಕಿಳಿಸಿತ್ತು ಎಂದು ವರದಿಯಾಗಿದೆ.
ಇದೀಗ ಇಂಗ್ಲೆಂಡ್ ಸರಣಿಗೆ ಅನುಮಾನವಾಗಿರುವ ಗಿಲ್ ಫೈನಲ್ ಪಂದ್ಯಕ್ಕೂ ಮೊದಲೇ ಗಾಯವಾಗಿದ್ದರು ಎನ್ನಲಾಗಿದೆ. ಹಾಗಿದ್ದರೂ ಅವರನ್ನು ರಿಸ್ಕ್ ತೆಗೆದುಕೊಂಡು ಆಡಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಇದೀಗ ಅವರ ಗಾಯ ಮತ್ತಷ್ಟು ಗಂಭೀರವಾಗಿದ್ದು ಎಂಟು ವಾರಗಳಿಗೆ ವಿಶ್ರಾಂತಿ ಪಡೆಯಬೇಕಾಗಿದೆ. ಒಂದು ವೇಳೆ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಗೂ ಮೊದಲೇ ಗಾಯವಾಗಿದ್ದರೆ, ಅವರನ್ನು ಆಡಿಸಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ. ಟೀಂ ಇಂಡಿಯಾದ ಇಂತಹ ನಿರ್ಧಾರದಿಂದ ಗಿಲ್ ಮತ್ತಷ್ಟು ಅಪಾಯಕ್ಕೀಡಾಗಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.