Publish Date: Wed, 30 Jun 2021 (11:51 IST)
Updated Date: Wed, 30 Jun 2021 (09:23 IST)
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಗ್ಗೆ ವೆಸ್ಟ್ ಇಂಡೀಸ್ ದಿಗ್ಗಜ ಮೈಕಲ್ ಹೋಲ್ಡಿಂಗ್ ವಾಗ್ದಾಳಿ ನಡೆಸಿದ್ದಾರೆ.
ಐಪಿಎಲ್ ಎನ್ನುವುದು ಕ್ರಿಕೆಟ್ ಅಲ್ಲ. ನಾನು ಕೇವಲ ಕ್ರಿಕೆಟ್ ಗೆ ಮಾತ್ರ ಕಾಮೆಂಟರಿ ಮಾಡುತ್ತೇನೆ ಎಂದು ಹೋಲ್ಡಿಂಗ್ ಹೇಳಿದ್ದಾರೆ.
ಐಪಿಎಲ್ ಎನ್ನುವುದು ಕ್ರಿಕೆಟ್ಟೇ ಅಲ್ಲ, ಈ ಕಾರಣಕ್ಕೇ ನಾನು ಅದನ್ನು ಫಾಲೋ ಮಾಡಲ್ಲ ಎಂದಿದ್ದಾರೆ. ಇನ್ನು, ಇತ್ತೀಚೆಗೆ ಕಿರು ಮಾದರಿ ಕ್ರಿಕೆಟ್ ನಿಂದಾಗಿ ಐಸಿಸಿ ಬ್ಯಾಟ್ಸ್ ಮನ್ ಗಳಿಗೆ ನೆರವಾಗುವ ನಿಯಮಗಳನ್ನು ಜಾರಿಗೆ ತಂದಿರುವುದಕ್ಕೂ ಹೋಲ್ಡಿಂಗ್ ಕಟು ಟೀಕೆ ಮಾಡಿದ್ದಾರೆ. ಇಂತಹ ನಿಯಮಗಳನ್ನು ಕ್ರಿಕೆಟ್ ನ್ನು ಹಾಳು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.