Publish Date: Wed, 23 Dec 2020 (09:37 IST)
Updated Date: Wed, 23 Dec 2020 (09:41 IST)
ಮೆಲ್ಬೋರ್ನ್: ಪಿತೃತ್ವ ರಜೆ ಪಡೆದು ಆಸ್ಟ್ರೇಲಿಯಾ ಸರಣಿಯ ಮಧ್ಯದಲ್ಲೇ ಭಾರತಕ್ಕೆ ಮರಳುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತವರಿಗೆ ಬರುವ ಮೊದಲು ತಂಡದ ಜೊತೆ ಮೀಟಿಂಗ್ ನಡೆಸಿದ್ದಾರೆ.
ಸರಣಿಯ ಉಳಿದ ಪಂದ್ಯಗಳಿಗೆ ಅಜಿಂಕ್ಯಾ ರೆಹಾನೆಗೆ ನಾಯಕತ್ವದ ಹೊಣೆ ನೀಡಲಾಗಿದೆ. ಆಸ್ಟ್ರೇಲಿಯಾ ಬಿಡುವ ಮುನ್ನ ತಂಡದ ಆಟಗಾರರನ್ನು ಹುರಿದುಂಬಿಸುವ ಮಾತನಾಡಿದ ಕೊಹ್ಲಿ ಮುಂದಿನ ಪಂದ್ಯಗಳಿಗೆ ಆಲ್ ದಿ ಬೆಸ್ಟ್ ಹೇಳಿ ಮರಳಿದ್ದಾರೆ ಎನ್ನಲಾಗಿದೆ. ನಿನ್ನೆಯೇ ಕೊಹ್ಲಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ್ದಾರೆ.