Publish Date: Tue, 22 Dec 2020 (10:15 IST)
Updated Date: Tue, 22 Dec 2020 (10:16 IST)
ಸಿಡ್ನಿ: ಹಾಗೂ ಹೀಗೂ ಫಿಟ್ ಆಗಿ ಆಸ್ಟ್ರೇಲಿಯಾ ಸೇರಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಈಗ ಅಲ್ಲಿ ತರಬೇತಿಯೂ ಸಿಗದಂತೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ!
ಆಂಗ್ಲ ಮಾಧ್ಯಮವೊಂದರ ಪ್ರಕಾರ ರೋಹಿತ್ ಶರ್ಮಾರನ್ನು 14 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಎರಡು ಬೆಡ್ ರೂಂನ ಅಪಾರ್ಟ್ ಮೆಂಟ್ ಒಂದರಲ್ಲಿ ಕೂಡಿ ಹಾಕಲಾಗಿದೆ. ಇಲ್ಲಿ ಅವರಿಗೆ ತರಬೇತಿ ಪಡೆಯಲೂ ಅವಕಾಶವಿಲ್ಲ. ಅಂದರೆ 14 ದಿನ ಯಾವುದೇ ತರಬೇತಿ ಇಲ್ಲದೇ ಅವರು ಕಾಲ ಕಳೆಯಬೇಕಿದೆ. ಕ್ವಾರಂಟೈನ್ ಮುಗಿದ ಬಳಿಕ ಆಸ್ಟ್ರೇಲಿಯಾ ಟೆಸ್ಟ್ ಗೆ ತಯಾರಾಗಲೂ ಅವರಿಗೆ ಅವಕಾಶ ಸಿಗೋದಿಲ್ಲ. ಪ್ರಮುಖ ಬ್ಯಾಟ್ಸ್ ಮನ್ ಒಬ್ಬರನ್ನು ಹೀಗೇಕೆ ನಡೆಸಿಕೊಳ್ಳಲಾಗುತ್ತಿದೆ ಎಂಬುದೇ ಪ್ರಶ್ನೆಯಾಗಿ ಉಳಿದಿದೆ.