ಮೆಲ್ಬೋರ್ನ್: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಿಂದ ತೊಡಗಿ ಅಭಿಮಾನಿಗಳವರೆಗೂ ಹಿಗ್ಗಾಮುಗ್ಗಾ ಟೀಕೆಗೊಳಗಾಗಿರುವ ಪೃಥ್ವಿ ಶಾಗೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಮೈಕ್ ಹಸ್ಸಿ ಬೆಂಬಲ ನೀಡಿದ್ದಾರೆ.
ಪೃಥ್ವಿ ಶಾರನ್ನು ಮುಂದಿನ ಟೆಸ್ಟ್ ನಿಂದ ಹೊರಗಿಡಲು ಒತ್ತಾಯ ಕೇಳಿಬಂದಿದೆ. ಮುಂದಿನ ಟೆಸ್ಟ್ ಗೆ ಅವರನ್ನು ಆಡಿಸುವುದೂ ಅನುಮಾನ. ಆದರೆ ಮೈಕ್ ಹಸ್ಸಿ ಮಾತ್ರ ಮೆಲ್ಬೋರ್ನ್ ಕ್ರಿಕೆಟ್ ಅಂಕಣ ಪೃಥ್ವಿ ಶಾಗೆ ಸಹಾಯ ಮಾಡಲಿದೆ. ಹೀಗಾಗಿ ಆಯ್ಕೆಗಾರರು ಅವರ ಮೇಲೆ ವಿಶ್ವಾಸವಿರಿಸಿ ಅವರನ್ನು ಆಡುವ ಬಳಗದಲ್ಲಿ ಉಳಿಸಿಕೊಳ್ಳಬೇಕು ಎಂದಿದ್ದಾರೆ.