Publish Date: Sat, 25 Aug 2018 (09:36 IST)
Updated Date: Sat, 25 Aug 2018 (09:38 IST)
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯದ ವೇಳೆ ಹೊಸದೊಂದು ದಾಖಲೆ ಬರೆದಿದ್ದಾರೆ.
ತೃತೀಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ 200 ಪ್ಲಸ್ ರನ್ ಮಾಡಿದ್ದರು. ಈ ರೀತಿ ಗೆಲುವಿನ ಪಂದ್ಯದಲ್ಲಿ 200 ಪ್ಲಸ್ ರನ್ ಗಳನ್ನು ಏಳನೇ ಬಾರಿ ಸಿಡಿಸುವ ಮೂಲಕ ಕೊಹ್ಲಿ ಹೊಸ ವಿಶ್ವದಾಖಲೆ ಬರೆದರು.
ಇದಕ್ಕೆ ಮೊದಲು ಆಸ್ಟ್ರೇಲಿಯಾದವರೇ ಆದ ರಿಕಿ ಪಾಂಟಿಂಗ್ ಮತ್ತು ಡಾನ್ ಬ್ರಾಡ್ಮನ್ ಗೆದ್ದ ಪಂದ್ಯದಲ್ಲಿ ಆರು ಬಾರಿ 200 ಪ್ಲಸ್ ರನ್ ಸಿಡಿಸಿ ದಾಖಲೆ ಮಾಡಿದ್ದರು. ಆ ದಾಖಲೆಯನ್ನೀಗ ಕೊಹ್ಲಿ ಹಿಂದಿಕ್ಕಿದ್ದಾರೆ. ಸದ್ಯಕ್ಕೆ ಟೆಸ್ಟ್ ಶ್ರೇಯಾಂಕದಲ್ಲೂ ನಂ.1 ಸ್ಥಾನಕ್ಕೆ ಮರಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.