Select Your Language

Notifications

webdunia
webdunia
webdunia
webdunia

ಹಣ ಸಂಗ್ರಹಿಸಲು ಬ್ಯಾಟ್, ಗ್ಲೌಸ್ ಹರಾಜಿಗಿಟ್ಟ ವಿರಾಟ್ ಕೊಹ್ಲಿ

ಹಣ ಸಂಗ್ರಹಿಸಲು ಬ್ಯಾಟ್, ಗ್ಲೌಸ್ ಹರಾಜಿಗಿಟ್ಟ ವಿರಾಟ್ ಕೊಹ್ಲಿ
ಮುಂಬೈ , ಮಂಗಳವಾರ, 28 ಏಪ್ರಿಲ್ 2020 (09:52 IST)
ಮುಂಬೈ: ಕೊರೋನಾದಿಂದಾಗಿ ಸಂಕಷ್ಟಕ್ಕೀಡಾದವರಿಗೆ ನೆರವಾಗಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಆರ್ ಸಿಬಿ ಸಹ ಕ್ರಿಕೆಟಿಗ, ದ.ಆಫ್ರಿಕಾದ ಎಬಿಡಿ ವಿಲಿಯರ್ಸ್ ಜತೆಗೆ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದಾರೆ.


ಇದಕ್ಕಾಗಿ 2016 ರ ಐಪಿಎಲ್ ನಲ್ಲಿ ತಾವಿಬ್ಬರೂ ಆರ್ ಸಿಬಿ ಪರ ಆಡಿದ್ದ ಪಂದ್ಯವೊಂದರಲ್ಲಿ ಧರಿಸಿದ್ದ ಶರ್ಟ್, ಗ್ಲೌಸ್, ಬ್ಯಾಟ್ ಆನ್ ಲೈನ್ ನಲ್ಲಿ ಹರಾಜಿಗಿಟ್ಟಿದ್ದಾರೆ. ಇದರ ಲಿಂಕ್ ಎಬಿಡಿ ವಿಲಿಯರ್ಸ್ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ನೀಡಿದ್ದಾರೆ.

ಯಾರು ಬೇಕಾದರೂ ಹರಾಜಿನಲ್ಲಿ ಪಾಲ್ಗೊಂಡು ಈ ಸ್ಟಾರ್ ಕ್ರಿಕೆಟಿಗರ ಅತ್ಯಮೂಲ್ಯ ಕ್ರಿಕೆಟ್ ಪರಿಕರಗಳನ್ನು ತಮ್ಮದಾಗಿಸಿಕೊಳ್ಳಬಹುದು. ವಿಜೇತರ ಹೆಸರನ್ನೂ ಇವರೇ ಇದೇ ಮೇ 10 ರಂದು ಘೋಷಿಸಲಿದ್ದಾರೆ. ಈ ವಿಚಾರವಾಗಿ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಥಿಕ ಸಂಕಷ್ಟದಲ್ಲಿರುವ ಕ್ರಿಕೆಟ್ ರಾಷ್ಟ್ರಗಳಿಗೆ ಬಿಸಿಸಿಐ ಆಫರ್