Select Your Language

Notifications

webdunia
webdunia
webdunia
webdunia

ಸುರೇಶ್ ರೈನಾ ಮೇಲೆ ಕನಿಷ್ಠ ಕೃತಜ್ಞತೆಯೂ ಇಲ್ಲವಾಯಿತೇಕೆ? ಟ್ವಿಟರಿಗರ ಆಕ್ರೋಶ

ಸುರೇಶ್ ರೈನಾ
ಚೆನ್ನೈ: ಐಪಿಎಲ್ ಕೂಟದಿಂದ ವೈಯಕ್ತಿಕ ಕಾರಣ ನೀಡಿ ಹೊರಬಂದಿರುವ ಸುರೇಶ್ ರೈನಾ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ಮಾಲಿಕ ಎನ್ ಶ್ರೀನಿವಾಸನ್ ನೀಡಿದ ಹೇಳಿಕೆ ಟ್ವಿಟರಿಗರ ಆಕ್ರೋಶಕ್ಕೆ ಕಾರಣವಾಗಿದೆ.


ಸುರೇಶ್ ರೈನಾ ಹೋಟೆಲ್ ಕೊಠಡಿ ಬಗ್ಗೆ ಅಸಮಾಧಾನ ಹೊಂದಿದ್ದರು. ಧೋನಿ ಜತೆ ವಿರಸವೇರ್ಪಟ್ಟಿತ್ತು. ಇದಕ್ಕಾಗಿ ಕೂಟದಿಂದ ಹೊರನಡೆದಿದ್ದಾರೆ ಎಂಬಿತ್ಯಾದಿ ಮಾತುಗಳು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಶ್ರೀನಿವಾಸನ್ ಕೂಡಾ ರೈನಾ ಮೇಲೆ ಕೆಂಡ ಕಾರಿದ್ದು, ನಾವು ಯಾರನ್ನೂ ಹಿಡಿದಿಟ್ಟುಕೊಳ್ಳಲಾಗದು. ಅವರೊಬ್ಬ ಬಂದು ಹೋದ ಅತಿಥಿ ಎಂಬರ್ಥದಲ್ಲಿ ಮಾತನಾಡಿರುವುದು ಅಭಿಮಾನಿಗಳನ್ನು ಕೆರಳಿಸಿದೆ.

12 ವರ್ಷಗಳಿಂದ ನಿಮ್ಮ ತಂಡದ ಪರವಾಗಿ ಆಡುತ್ತಿರುವ ಆಟಗಾರನಿಗೆ ಇಂಥಾ ಮರ್ಯಾದೆಯೇ ನೀಡುವುದು? ರೈನಾ ಮೇಲೆ ಕನಿಷ್ಠ ಕೃತಜ್ಞತೆಯೂ ಇಲ್ಲವಾಯಿತೇ? ಕೇವಲ ಹೋಟೆಲ್ ರೂಂಗಾಗಿ ಅವರು ಧೋನಿ ಜತೆ ಕಿತ್ತಾಡುವರೇ? ರೈನಾ-ಧೋನಿ ಗೆಳೆತನ ಅಷ್ಟು ದರ್ಬಲವೇ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಮುಂಬೈ-ಚೆನ್ನೈ ನಡುವೆ ಆರಂಭಿಕ ಮ್ಯಾಚ್ ನಡೆಯಲ್ಲ