Publish Date: Sun, 24 Jan 2021 (08:59 IST)
Updated Date: Sun, 24 Jan 2021 (09:00 IST)
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಪ್ರೇಕ್ಷಕರು ಮಾತ್ರವಲ್ಲ, ಕ್ರಿಕೆಟಿಗರೂ ತಾರತಮ್ಯ ಮಾಡಿದ್ದರು ಎಂಬ ಸಂಗತಿಯನ್ನು ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಬಹಿರಂಗಪಡಿಸಿದ್ದಾರೆ.
ಸಿಡ್ನಿ ಟೆಸ್ಟ್ ಸಂದರ್ಭದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಸ್ಟ್ರೇಲಿಯಾ ಆಟಗಾರರ ಜೊತೆಗೆ ಲಿಫ್ಟ್ ನಲ್ಲಿ ತೆರಳುವ ಅವಕಾಶವೂ ಇರಲಿಲ್ಲ. ಈ ತಾರತಮ್ಯದಿಂದಾಗಿ ಕ್ರಿಕೆಟಿಗರಿಗೆ ಬೇಸರವಾಗಿತ್ತು ಎಂದು ಅಶ್ವಿನ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ನಮಗೆ ಮಾತ್ರ ಕಠಿಣ ನಿಯಮಗಳಿತ್ತು. ನಮ್ಮನ್ನು ಮಾತ್ರ ಕೊಠಡಿಯಲ್ಲೇ ಕೂಡಿ ಹಾಕಲಾಗಿತ್ತು ಎಂದು ಅಶ್ವಿನ್ ಹೇಳಿಕೊಂಡಿದ್ದಾರೆ.