Publish Date: Tue, 17 Nov 2020 (10:23 IST)
Updated Date: Tue, 17 Nov 2020 (10:25 IST)
ಮುಂಬೈ: ಐಪಿಎಲ್ 13 ರ ಮುಂಬೈ ಇಂಡಿಯನ್ಸ್-ಆರ್ ಸಿಬಿ ನಡುವಿನ ಪಂದ್ಯದಲ್ಲಿ ಕೊಹ್ಲಿ ಮುಂಬೈಯ ಯುವ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ರನ್ನು ಸ್ಲೆಡ್ಜ್ ಮಾಡಿದ್ದು, ಅವರು ಅದಕ್ಕೆ ನೀಡಿದ್ದ ತಿರುಗೇಟು ಭಾರೀ ವೈರಲ್ ಆಗಿತ್ತು.
ಇದೀಗ ಸೂರ್ಯಕುಮಾರ್ ಯಾದವ್ ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದಾರೆ. ಕೊಹ್ಲಿಯನ್ನು ಟ್ರೋಲ್ ಮಾಡಿದ ಟ್ವೀಟ್ ಒಂದನ್ನು ಲೈಕ್ ಮಾಡಿದ ಸೂರ್ಯ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಇದು ವಿವಾದಕ್ಕೆಡೆ ಮಾಡುವ ಸೂಚನೆ ಸಿಗುತ್ತಿದ್ದಂತೇ ಮರಳಿ ಅನ್ ಲೈಕ್ ಮಾಡಿದ್ದಾರೆ. ಈ ರೀತಿ ಮಾಡಿದರೆ ನಿನ್ನ ಮುಂದಿನ ಬೆಳವಣಿಗೆ ಕಷ್ಟ ಎಂದು ಕೆಲವರು ಸೂರ್ಯಗೆ ಎಚ್ಚರಿಕೆ ನೀಡಿದ್ದಾರೆ.