Select Your Language

Notifications

webdunia
webdunia
webdunia
webdunia

ಕೊಹ್ಲಿಯ ಕೆಣಕಲು ಶುರುವಿಟ್ಟುಕೊಂಡ ಆಸ್ಟ್ರೇಲಿಯನ್ನರು

ಕೊಹ್ಲಿಯ ಕೆಣಕಲು ಶುರುವಿಟ್ಟುಕೊಂಡ ಆಸ್ಟ್ರೇಲಿಯನ್ನರು
ಸಿಡ್ನಿ , ಸೋಮವಾರ, 16 ನವೆಂಬರ್ 2020 (09:31 IST)
ಸಿಡ್ನಿ: ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಸರಣಿಗಾಗಿ ಬಂದಿಳಿದ ಬೆನ್ನಲ್ಲೇ ಅತಿಥೇಯರು ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಲು ಶುರು ಮಾಡಿದ್ದಾರೆ.


ಕೊಹ್ಲಿ ಟೆಸ್ಟ್ ಸರಣಿಯ ಮೂರು ಪಂದ್ಯಗಳಿಗೆ ಅಲಭ್ಯರಿರುವುದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಕೆಲವರು ಹೇಳಿದರೆ, ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ಕೊಹ್ಲಿ ನನಗೆ ಇತರ ಎಲ್ಲಾ ಆಟಗಾರರಂತೆ ಕೇವಲ ಮತ್ತೊಬ್ಬ ಕ್ರಿಕೆಟಿಗನಷ್ಟೇ. ಆತ ನನಗೆ ಸ್ಪೆಷಲ್ ಏನೂ ಅಲ್ಲ ಎಂದು ಕಾಲೆಳೆದಿದ್ದಾರೆ. ಆತನನ್ನು ಧ್ವೇಷಿಸುವುದೆಂದರೆ ನನಗೆ ಇಷ್ಟ ಎಂದಿದ್ದಾರೆ. ಹಿಂದಿನ ಪ್ರವಾಸಗಳಲ್ಲೂ ಪೇಯ್ನ್ ಕೊಹ್ಲಿ ವಿರುದ್ಧ ಕತ್ತಿ ಮಸೆದಿದ್ದರು.  ಈ ಬಾರಿಯೂ ಅದನ್ನೇ ಮುಂದುವರಿಸಿದ್ದಾರೆ. ಸಾಮಾನ್ಯವಾಗಿ ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿಯನ್ನು ಆಸ್ಟ್ರೇಲಿಯನ್ನರು ಇನ್ನಿಲ್ಲದಂತೆ ಸ್ಲೆಡ್ಜ್ ಮಾಡಿ ಕಾಡುತ್ತಾರೆ. ಆದರೆ ಈ ಬಾರಿ ಕೊಹ್ಲಿ ಟೆಸ್ಟ್ ಸರಣಿಗೆ ಗೈರಾಗಿರುವುದು ಅವರಿಗೆ ಒಂದು ರೀತಿಯಲ್ಲಿ ಬೇಸರವುಂಟುಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಟಾಕಿ ಹೊಡೆಯಬೇಡಿ ಎಂದ ಕೊಹ್ಲಿಯನ್ನು ಟ್ರೋಲ್ ಮಾಡಿದ ಫ್ಯಾನ್ಸ್