Publish Date: Wed, 18 Nov 2020 (10:36 IST)
Updated Date: Wed, 18 Nov 2020 (10:38 IST)
ಮುಂಬೈ: ವಿರಾಟ್ ಕೊಹ್ಲಿಯನ್ನು ಕಾಗದದ ಹುಲಿ ಎಂದು ಲೇವಡಿ ಮಾಡುವ ಟ್ವೀಟ್ ಲೈಕ್ ಮಾಡಿ ವಿವಾದಕ್ಕೀಡಾಗಿದ್ದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಈಗ ವಿವಾದದ ಬಳಿಕ ಕೊಹ್ಲಿಗೆ ಐಸ್ ಇಡಲು ಶುರು ಮಾಡಿದ್ದಾರೆ!
ಕೊಹ್ಲಿ ಸ್ಲೆಡ್ಜಿಂಗ್ ಗೆ ಐಪಿಎಲ್ ಪಂದ್ಯದಲ್ಲಿ ತಿರುಗೇಟು ನೀಡಿ ಸುದ್ದಿಯಾಗಿದ್ದ ಸೂರ್ಯಕುಮಾರ್ ಬಳಿಕ ನಿನ್ನೆ ಕೊಹ್ಲಿ ವಿರುದ್ಧದ ಟ್ವೀಟ್ ಲೈಕ್ ಮಾಡಿ ಸುದ್ದಿಯಾಗಿದ್ದರು. ಕೆಲವರು ಇದು ನಿಮ್ಮಂತಹ ಯುವ ಬ್ಯಾಟ್ಸ್ ಮನ್ ಗಳ ಭವಿಷ್ಯಕ್ಕೆ ಮಾರಕವಾಗಬಹುದು ಎಂದು ಎಚ್ಚರಿಸಿದ್ದರು. ಇದಾದ ಬಳಿಕ ಎಚ್ಚೆತ್ತುಕೊಂಡಿರುವ ಸೂರ್ಯ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತಾವು ಸಿದ್ಧರಾಗುತ್ತಿರುವ ವಿಡಿಯೋ ಪ್ರಕಟಿಸಿರುವ ಟ್ವೀಟ್ ಗೆ ನೋಡಲು ಕಾತುರನಾಗಿರುವೆ ಎಂದು ಕಾಮೆಂಟ್ ಮಾಡುವ ಮೂಲಕ ನಾಯಕನನ್ನು ಖುಷಿಪಡಿಸಲು ಯತ್ನಿಸಿದ್ದಾರೆ.