Publish Date: Wed, 18 Nov 2020 (10:09 IST)
Updated Date: Wed, 18 Nov 2020 (10:10 IST)
ಸಿಡ್ನಿ: ಪತ್ನಿ ಅನುಷ್ಕಾ ಶರ್ಮಾ ಹೆರಿಗೆಗಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಹೊರಕ್ಕುಳಿಯುವ ನಿರ್ಧಾರ ಮಾಡಿದ್ದರು. ಇದೀಗ ಅವರದ್ದೇ ಹಾದಿಯಲ್ಲಿ ಮತ್ತೊಬ್ಬ ಕ್ರಿಕೆಟಿಗ ಸರಣಿಯಿಂದ ಹಿಂದೆ ಸರಿದಿದ್ದಾರೆ.
ಆಸ್ಟ್ರೇಲಿಯಾ ತಂಡ ಕೇನ್ ರಿಚರ್ಡ್ ಸನ್ ತಮ್ಮ ಪತ್ನಿ ಮತ್ತು ನವಜಾತ ಮಗುವಿನ ಜತೆಗಿರಲು ಭಾರತದ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ. ಅವರ ಬದಲಿಗೆ ಈಗ ಆಸೀಸ್ ತಂಡಕ್ಕೆ ಆಂಡ್ರೆ ಟೈ ಅವರನ್ನು ಆಯ್ಕೆ ಮಾಡಲಾಗಿದೆ.