ಸಿಡ್ನಿ: ಐಪಿಎಲ್ ನಿಂದ ಗಾಯದ ಕಾರಣಕ್ಕೆ ಹೊರಬಿದ್ದಿದ್ದ ವೇಗಿ ಇಶಾಂತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಟೀಂ ಇಂಡಿಯಾ ಟೆಸ್ಟ್ ಸರಣಿ ವೇಳೆ ತಂಡಕ್ಕೆ ಮರಳುವ ಸಾಧ‍್ಯತೆಯಿದೆ.
ಇಶಾಂತ್ ಸದ್ಯಕ್ಕೆ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಟೆಸ್ಟ್ ಸರಣಿ ವೇಳೆಗೆ ಫಿಟ್ ಆಗಿ ತಂಡಕ್ಕೆ ಮರಳುವ ವಿಶ್ವಾಸದಲ್ಲಿದೆ. ಜನವರಿಯಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದ್ದು, ಇಶಾಂತ್ ಚೇತರಿಕೆ ಬಗ್ಗೆ ಎನ್ ಸಿಎ ಅಧ್ಯಕ್ಷ ರಾಹುಲ್ ದ್ರಾವಿಡ್ ಬಿಸಿಸಿಐಗೆ ವರದಿ ನೀಡಿದ್ದಾರೆ ಎನ್ನಲಾಗಿದೆ.