ಮುಂಬೈ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಮೂರು ಪಂದ್ಯಗಳಿಗೆ ವಿರಾಟ್ ಕೊಹ್ಲಿ ಗೈರಾಗಲಿರುವುದು ರೋಹಿತ್ ಶರ್ಮಾ ಪಾಲಿಗೆ ವರದಾನವಾಗಲಿದೆ.
ಹೀಗಾಗಿ ಈ ಸರಣಿ ಒಂದು ರೀತಿಯಲ್ಲಿ ರೋಹಿತ್-ಕೊಹ್ಲಿ ಪೈಪೋಟಿಗೆ ಮತ್ತೊಂದು ವೇದಿಕೆಯಾಗಲಿದೆ. ಇಬ್ಬರಲ್ಲಿ ಯಾರು ನಾಯಕರಾಗಿ ಸೂಕ್ತ ಎಂಬ ಪ್ರಶ್ನೆಗೆ ಈ ಸರಣಿ ಉತ್ತರ ನೀಡಲಿದೆ. ಇದಕ್ಕೂ ಮೊದಲು ರೋಹಿತ್ ಸೀಮಿತ ಓವರ್ ಗಳಲ್ಲಿ ನಾಯಕರಾಗಿದ್ದರು. ಆದರೆ ಟೆಸ್ಟ್ ಪಂದ್ಯಗಳಿಗೆ ನಾಯಕರಾಗದೇ ಅವರ ನಾಯಕತ್ವವನ್ನು ರಾಷ್ಟ್ರೀಯ ತಂಡದಲ್ಲಿ ತೂಗುವುದು ಕಷ್ಟ. ಈ ಸರಣಿಗೆ ರೋಹಿತ್ ನಾಯಕರಾದರೆ ಕೊಹ್ಲಿ ಮತ್ತು ರೋಹಿತ್ ನಾಯಕತ್ವದಲ್ಲಿ ಯಾರು ಬೆಸ್ಟ್ ಎನ್ನುವ ಚರ್ಚೆಗೆ ಮತ್ತೆ ಚಾಲನೆ ಸಿಗಲಿದೆ.