Select Your Language

Notifications

webdunia
webdunia
webdunia
webdunia

2021 ರ ಐಪಿಎಲ್ ನಲ್ಲಿ ಭಾಗಿಯಾಗುವುದು ಪಕ್ಕಾ ಎಂದ ಸುರೇಶ್ ರೈನಾ

2021 ರ ಐಪಿಎಲ್ ನಲ್ಲಿ ಭಾಗಿಯಾಗುವುದು ಪಕ್ಕಾ ಎಂದ ಸುರೇಶ್ ರೈನಾ
ಮುಂಬೈ , ಗುರುವಾರ, 10 ಡಿಸೆಂಬರ್ 2020 (09:40 IST)
ಮುಂಬೈ: 2021 ರ ಐಪಿಎಲ್ ನಲ್ಲಿ ಭಾಗವಹಿಸುವುದು ಪಕ್ಕಾ ಎಂದು ಕ್ರಿಕೆಟಿಗ ಸುರೇಶ್ ರೈನಾ ಸ್ಪಷ್ಟಪಡಿಸಿದ್ದಾರೆ. ಕಳೆದ ಐಪಿಎಲ್ ನಲ್ಲಿ ಅವರು ಕೊನೆಯ ಕ್ಷಣದಲ್ಲಿ ತಂಡದಿಂದ ಹೊರನಡೆದಿದ್ದರು.


ಕೊರೋನಾ  ಮತ್ತು ಕೌಟುಂಬಿಕ ಕಾರಣ ನೀಡಿ ಯುಎಇಗೆ ತೆರಳಿದ್ದ ಸುರೇಶ್ ರೈನಾ ಇದ್ದಕ್ಕಿದ್ದಂತೆ ಐಪಿಎಲ್ ನಿಂದ ಹೊರಬಂದಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅದಾದ ಬಳಿಕ ಸಿಎಸ್ ಕೆ ತಂಡ ತನ್ನ ವೆಬ್ ಸೈಟ್ ನಿಂದ ರೈನಾ ಹೆಸರನ್ನು ಕಿತ್ತು ಹಾಕಿತ್ತು. ಹೀಗಾಗಿ ಅವರು ಮುಂದಿನ ಐಪಿಎಲ್ ನಲ್ಲಿ ಮತ್ತೆ ಸಿಎಸ್ ಕೆ ಪರ ಆಡುತ್ತಾರಾ ಎಂಬುದು ಖಚಿತವಿಲ್ಲ. ಆದರೆ ಅದಕ್ಕೂ ಮೊದಲು ತಮ್ಮ ತವರು ಉತ್ತರ ಪ್ರದೇಶದ ಪರ ದೇಶೀಯ ಕ್ರಿಕೆಟ್ ನಲ್ಲಿ ಆಡುವ ಸಾಧ‍್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈತರ ಬೆಂಬಲಿಸಿ! ವಿರಾಟ್ ಕೊಹ್ಲಿಗೆ ಅಭಿಮಾನಿ ಯುವತಿಯ ಆಗ್ರಹ