Publish Date: Wed, 09 Dec 2020 (10:32 IST)
Updated Date: Wed, 09 Dec 2020 (10:33 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮುಂದಿನ ವಾರದಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಿಂದ ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ಹೊರಬಿದ್ದಿದ್ದಾರೆ.
ಏಕದಿನ ಸರಣಿ ವೇಳೆ ಡೇವಿಡ್ ವಾರ್ನರ್ ತೊಡೆನೋವಿಗೊಳಗಾಗಿದ್ದರು. ಇದಾದ ಬಳಿಕ ಅವರು ಟಿ20 ಸರಣಿಯಲ್ಲೂ ಆಡಿರಲಿಲ್ಲ. ಆದರೆ ಇನ್ನೂ ಫಿಟ್ ಆಗದ ಕಾರಣ ಮೊದಲ ಟೆಸ್ಟ್ ನಿಂದಲೂ ಹೊರಗುಳಿಯುವ ಅನಿವಾರ್ಯತೆ ಎದುರಾಗಿದೆ. ಹೊಡೆಬಡಿಯ ಆರಂಭಿಕನ ಅನುಪಸ್ಥಿತಿ ಆಸ್ಟ್ರೇಲಿಯಾ ದೊಡ್ಡ ಪೆಟ್ಟು ನೀಡಲಿದೆ.