ಸಿಡ್ನಿ: ಟೀಂ ಇಂಡಿಯಾ ನಾಯಕನ ವಿರಾಟ್ ಕೊಹ್ಲಿಯನ್ನೇ ಹೋಲುವ ವ್ಯಕ್ತಿಯೊಬ್ಬ ಇರುವ ಬಗ್ಗೆ ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೀಗ ಅದೇ ವ್ಯಕ್ತಿ ಭಾರತ-ಆಸೀಸ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡು ಸ್ವತಃ ಕೊಹ್ಲಿಗೇ ಚಮಕ್ ಕೊಟ್ಟಿದ್ದಾನೆ.
ತನ್ನನ್ನೇ ಹೋಲುವ ವ್ಯಕ್ತಿ ಮೈದಾನದ ಸ್ಕ್ರೀನ್ ಮೇಲೆ ಬಂದಾಗ ಅರೆ ಕ್ಷಣ ಕೊಹ್ಲಿಯೂ ಅಚ್ಚರಿಯಿಂದ ಸ್ಕ್ರೀನ್ ಕಡೆಗೆ ನೋಡಿದ್ದಾರೆ. ಥೇಟ್ ಕೊಹ್ಲಿಯಂತೇ ದಾಡಿ ಬಿಟ್ಟುಕೊಂಡು, ಗ್ಲಾಸ್ ತೊಟ್ಟುಕೊಂಡು ಕೂತಿದ್ದ ಈ ವ್ಯಕ್ತಿಯನ್ನು ನೋಡಿ ಪ್ರೇಕ್ಷಕರೂ ಅಚ್ಚರಿಗೊಳಗಾಗಿದ್ದಾರೆ.