ಸಿಡ್ನಿ: ಭಾರತ ಮತ್ತು ಆಸೀಸ್ ನಡುವಿನ ಮೂರನೇ ಟಿ20 ಪಂದ್ಯವನ್ನು ಆಸೀಸ್ 12 ರನ್ ಗಳಿಂದ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಅವಮಾನ ತಪ್ಪಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಈ ಬೃಹತ್ ಗುರಿ ಬೆನ್ನತ್ತಿದ ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕ ಕೈಕೊಟ್ಟಿದ್ದರಿಂದ ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ನಾಯಕ ಕೊಹ್ಲಿ 61 ಎಸೆತಗಳಿಂದ 81, ಶಿಖರ್ ಧವನ್ 28, ಹಾರ್ದಿಕ್ ಪಾಂಡ್ಯ 20 ರನ್ ಗಳಿಸಿದರು. 16 ನೇ ಓವರ್ ನಲ್ಲಿ ಹಾರ್ದಿಕ್ ಮತ್ತು ಕೊಹ್ಲಿ ಸತತ ಸಿಕ್ಸರ್ ಗಳನ್ನು ಸಿಡಿಸಿದಾಗ ಮತ್ತೆ ದ್ವಿತೀಯ ಪಂದ್ಯದ ದೃಶ್ಯ ಪುನರಾವರ್ತನೆಯಾಗಿ ಟೀಂ ಇಂಡಿಯಾ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಈ ವೇಳೆ ಪಾಂಡ್ಯ ಮತ್ತು ಕೊಹ್ಲಿ ವಿಕೆಟ್ ಉರುಳಿದ್ದರಿಂದ ಭಾರತ ಸೋಲಿಗೆ ಶರಣಾಯಿತು. ಇದರೊಂದಿಗೆ 2-1 ಅಂತರದಿಂದ ಸರಣಿ ಭಾರತದ ಪಾಲಾಯಿತು.
ಈಗಾಗಲೇ 2-0 ಅಂತರದಿಂದ ಸರಣಿ ಗೆದ್ದಿರುವ ಟೀಂ ಇಂಡಿಯಾ ಇಂದು ಗೆದ್ದರೆ ಸರಣಿ ಕ್ಲೀನ್ ಸ್ವೀಪ್ ಆಗಲಿದೆ. ಇಂದಿನ ಪಂದ್ಯದಲ್ಲಿ ಭಾರತ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಿದೆ. ಇನ್ನು, ಆಸ್ಟ್ರೇಲಿಯಾಗೆ ನಾಯಕ ಏರಾನ್ ಫಿಂಚ್ ಆಗಮನ ಬಲ ನೀಡಲಿದೆ.