Publish Date: Thu, 10 Dec 2020 (09:22 IST)
Updated Date: Thu, 10 Dec 2020 (09:24 IST)
ಸಿಡ್ನಿ: ಕೇಂದ್ರ ಸರ್ಕಾರದ ಹೊಸ ಕೃಷಿ ಮಸೂದೆ ವಿರೋಧಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ದೂರದ ಆಸ್ಟ್ರೇಲಿಯಾವರೆಗೂ ತಲುಪಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಯುವತಿಯೊಬ್ಬಳು ವಿರಾಟ್ ರೈತರಿಗೆ ಬೆಂಬಲ ನೀಡಿ ಎಂದು ಕೂಗಿ ಕರೆಕೊಟ್ಟಿದ್ದಾಳೆ.
ಪಂದ್ಯ ಮುಗಿಸಿ ಪೆವಿಲಿಯನ್ ಗೆ ಮರಳುತ್ತಿರುವ ವಿರಾಟ್ ಮತ್ತು ಬಳಗಕ್ಕೆ ಕೇಳುವಂತೆ ಯುವತಿ ಜೋರಾಗಿ ವಿರಾಟ್ ರೈತರನ್ನು ಬೆಂಬಲಿಸಿ ಎಂದು ಕೂಗುತ್ತಾಳೆ. ಇದು ವಿರಾಟ್ ಕಿವಿಗೆ ಬಿದ್ದರೂ ಅವರು ಏನೂ ಪ್ರತಿಕ್ರಿಯಿಸದೇ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಾರೆ.