Select Your Language

Notifications

webdunia
webdunia
webdunia
webdunia

ನಿವೃತ್ತಿಯಲ್ಲೂ ಧೋನಿಗೆ ಸಾಥ್ ನೀಡಿದ ಗೆಳೆಯ ಸುರೇಶ್ ರೈನಾ

ನಿವೃತ್ತಿಯಲ್ಲೂ ಧೋನಿಗೆ ಸಾಥ್ ನೀಡಿದ ಗೆಳೆಯ ಸುರೇಶ್ ರೈನಾ
ಚೆನ್ನೈ , ಶನಿವಾರ, 15 ಆಗಸ್ಟ್ 2020 (20:42 IST)
ಚೆನ್ನೈ: ಧೋನಿ-ಸುರೇಶ್ ರೈನಾ ಉತ್ತಮ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತು. ಇದೀಗ ನಿವೃತ್ತಿ ವಿಚಾರದಲ್ಲೂ ತಾವಿಬ್ಬರೂ ಒಂದೇ ಎಂದು ರೈನಾ ಸಾರಿದ್ದಾರೆ. ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ತಾವೂ ಅದೇ ರೀತಿಯಲ್ಲಿ ನಿವೃತ್ತಿ ಘೋಷಿಸಿದ್ದಾರೆ.


ಧೋನಿ ಇನ್ ಸ್ಟಾಗ್ರಾಂ ಮೂಲಕ ಚುಟುಕು ಸಂದೇಶ ಬರೆದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇದಾಗಿ ಅರ್ಧಗಂಟೆ ಬಳಿಕ ರೈನಾ ಕೂಡಾ ಇನ್ ಸ್ಟಾಗ್ರಾಂ ಸಂದೇಶದ ಮೂಲಕ ನಿವೃತ್ತಿ ಘೋಷಣೆ ಮಾಡಿದ್ದಾರೆ.

‘ನಿಮ್ಮ ಜತೆ ಆಡಿದ್ದು ಅವಿಸ್ಮರಣೀಯ ಮಹಿ. ಹೆಮ್ಮೆಯೊಂದಿಗೆ ನಿಮ್ಮ ಈ ನಿವೃತ್ತಿಯ ಪಯಣದಲ್ಲಿ ಜತೆಯಾಗಲು ಬಯಸುತ್ತೇನೆ. ಥ್ಯಾಂಕ್ಯೂ ಇಂಡಿಯಾ, ಜೈ ಹಿಂದ್’ ಎಂದು ರೈನಾ ಬರೆದುಕೊಂಡಿದ್ದಾರೆ. ಅಂತೂ ಟೀಂ ಇಂಡಿಯಾದ ಗೆಳೆಯರಿಬ್ಬರೂ ಒಂದೇ ದಿನ ನಿವೃತ್ತಿ ಘೋಷಿಸಿ ಕ್ರಿಕೆಟ್ ಪ್ರಿಯರಿಗೆ ಶಾಕ್ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಧೋನಿ: ವಿದಾಯ ಸಂದೇಶದಲ್ಲಿ ಏನಿದೆ ಗೊತ್ತಾ?