Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟಗಾರರು ಐಪಿಎಲ್ ತಂಡ ಕೂಡಿಕೊಳ್ಳುವ ದಿನಾಂಕ ಫಿಕ್ಸ್

ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟಗಾರರು ಐಪಿಎಲ್ ತಂಡ ಕೂಡಿಕೊಳ್ಳುವ ದಿನಾಂಕ ಫಿಕ್ಸ್
ದುಬೈ , ಶನಿವಾರ, 15 ಆಗಸ್ಟ್ 2020 (11:32 IST)
ದುಬೈ: ತಮ್ಮ ದೇಶದ ಪರ ಕ್ರಿಕೆಟ್ ಸರಣಿಗಳಲ್ಲಿ ಬ್ಯುಸಿಯಾಗಿರುವ ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟಿಗರು ಐಪಿಎಲ್ ತಂಡ ಕೂಡಿಕೊಳ್ಳುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.


ಐಪಿಎಲ್ ಗೆ ಕೆಲವೇ ದಿನಗಳ ಮೊದಲು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಟಿ20 ಸರಣಿ ನಡೆಯಲಿದೆ. ಹೀಗಾಗಿ ಟಿ20 ಸರಣಿ ಮುಗಿಸಿಕೊಂಡು ಕ್ವಾರಂಟೈನ್ ನಿಯಮಗಳನ್ನು ಅನುಸರಿಸಿ ಈ ಆಟಗಾರರು ಐಪಿಎಲ್ ತಂಡ ಕೂಡಿಕೊಳ್ಳಲು ತಡವಾಗಬಹುದು ಎನ್ನಲಾಗಿತ್ತು.

ಇದೀಗ ಈ ಆಟಗಾರರು ಸೆಪ್ಟೆಂಬರ್ 26 ರ ಬಳಿಕ ಐಪಿಎಲ್ ಗೆ ಹಾಜರಾಗುವುದು ಖಚಿತವಾಗಿದೆ. ಸೆಪ್ಟೆಂಬರ್ 17 ರಂದು ಯುಎಇಗೆ ಬಂದಿಳಿದು ಮೂರು ಬಾರಿ ಕೊರೋನಾ ಪರೀಕ್ಷೆ ನಡೆಸಿಕೊಂಡು ನೆಗೆಟಿವ್ ವರದಿ ಬಂದ ಮೇಲೆ ಈ ಆಟಗಾರರು ತಮ್ಮ ತಂಡವನ್ನು ಕೂಡಿಕೊಳ್ಳಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿವೃತ್ತಿಯಿಂದ ವಾಪಸ್ ಬನ್ನಿ: ಕ್ರಿಕೆಟಿಗ ಯುವರಾಜ್ ಸಿಂಗ್ ಗೆ ಮನವಿ