Publish Date: Fri, 14 Aug 2020 (12:42 IST)
Updated Date: Fri, 14 Aug 2020 (12:43 IST)
ಮುಂಬೈ: ಐಪಿಎಲ್ 13 ಆವೃತ್ತಿಗೆ ಕೆಲವೇ ದಿನಗಳು ಬಾಕಿಯಿದ್ದು, ಎಲ್ಲಾ ಫ್ರಾಂಚೈಸಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಲೇ ಸಕ್ರಿಯವಾಗಿವೆ. ಈ ನಡುವೆ ಆರ್ ಸಿಬಿ ತನ್ನ ಟ್ವಿಟರ್ ಪೇಜ್ ನಲ್ಲಿ ನಾಯಕ ಕೊಹ್ಲಿಯನ್ನು ಸಿಂಹಕ್ಕೆ ಹೋಲಿಕೆ ಮಾಡಿದ್ದಕ್ಕೆ ಸಿಎಸ್ ಕೆ ತಂಡ ಟಾಂಗ್ ಕೊಟ್ಟಿದೆ.
ಸಿಂಹ ಹಾಗೂ ಕೊಹ್ಲಿಯ ಫೋಟೋವನ್ನು ಜತೆಗೇ ಪ್ರಕಟಿಸಿದ್ದ ಆರ್ ಸಿಬಿ ಕೊಹ್ಲಿಯನ್ನು ಸಿಂಹಕ್ಕೆ ಹೋಲಿಸಿತ್ತು. ಆದರೆ ಈ ಫೋಟೋಕ್ಕೆ ಟಾಂಗ್ ಕೊಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಟ್ವಿಟರ್ ಪೇಜ್ ಕೊಹ್ಲಿಯನ್ನು ಮೂದಲಿಸಿದೆ.
‘ಅಯ್ಯೋ ಅಮ್ಮ ಇಷ್ಟು ದಿನ ನಿನಗಾಗಿ ಕಾದಿದ್ದಳು. ಎಲ್ಲಿ ಹೋಗಿದ್ದೆ ಇಷ್ಟು ದಿನ?’ ಎಂದು ಕೊಹ್ಲಿಯನ್ನು ಮಗುವಿಗೆ ಹೋಲಿಸಿ ಕಾಲೆಳೆದಿದೆ. ಐಪಿಎಲ್ ಸಂದರ್ಭದಲ್ಲಿ ಇಂತಹಾ ಟಾಂಗ್, ಟ್ರೋಲ್ ಗಳು ಸಾಮಾನ್ಯ ಬಿಡಿ.