Publish Date: Wed, 12 Aug 2020 (12:46 IST)
Updated Date: Wed, 12 Aug 2020 (12:48 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೋಸ್ಟ್ ವಾಂಟೆಡ್ ಸೆಲೆಬ್ರಿಟಿ ಕಪಲ್ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಪವರ್ ಕಪಲ್ ಈಗ ತಮ್ಮಿಬ್ಬರ ನಡುವೆ ಒಬ್ಬರೊನ್ನೊಬ್ಬರು ಯಾರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಸ್ಪರ್ಧೆಯೊಂದನ್ನು ಮಾಡಿದ್ದಾರೆ.
ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿರುವ ದಂಪತಿ ಪರಸ್ಪರರ ವೃತ್ತಿ, ವೈಯಕ್ತಿಕ ವಿಚಾರಗಳ ಕುರಿತಾಗಿ ಪ್ರಶ್ನೆ ಮಾಡಿ ಇಬ್ಬರಲ್ಲಿ ಯಾರು ಹೆಚ್ಚು ಇನ್ನೊಬ್ಬರನ್ನು ಅರ್ಥ ಮಾಡಿಕೊಂಡಿರುವುದು ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ವಿರಾಟ್ ಗೆ ಅನುಷ್ಕಾ ಸಿನಿಮಾಗೆ ಸಂಬಂಧಿಸಿದ ಪ್ರಶ್ನೆ ಕೇಳಿದರೆ ಅನುಷ್ಕಾಗೆ ಕೊಹ್ಲಿ ಕ್ರಿಕೆಟ್ ಗೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದಾರೆ. ವಿಶೇಷವೆಂದರೆ ಈ ರೌಂಡ್ ನಲ್ಲಿ ಅನುಷ್ಕಾ ಗೆದ್ದಿದ್ದಾರೆ. ಬಳಿಕ ವೈಯಕ್ತಿಕ ಜೀವನದ ಬಗ್ಗೆ ಪರಸ್ಪರರು ಪ್ರಶ್ನೆ ಮಾಡಿದಾಗಿ ಇಬ್ಬರೂ ಸಮಾನ ಅಂಕ ಪಡೆದಿದ್ದಾರೆ. ಇವರ ಈ ವಿಡಿಯೋ ಈಗ ವೈರಲ್ ಆಗಿದೆ.