Publish Date: Tue, 26 Feb 2019 (10:00 IST)
Updated Date: Tue, 26 Feb 2019 (10:03 IST)
ಮುಂಬೈ: ಟೀಂ ಇಂಡಿಯಾದಲ್ಲಿ ಕಡೆಗಣಿಸಲ್ಪಟ್ಟರೇನಂತೆ? ಕ್ರಿಕೆಟಿಗ ಸುರೇಶ್ ರೈನಾ ಟಿ20 ಕ್ರಿಕೆಟ್ ನಲ್ಲಿ ವಿನೂತನ ದಾಖಲೆಯೊಂದನ್ನು ಮಾಡಿದ್ದಾರೆ.
ಸದ್ಯಕ್ಕೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ ನಲ್ಲಿ ಉತ್ತರ ಪ್ರದೇಶದ ಪರ ಆಡುತ್ತಿರುವ ರೈನಾ ಟಿ20 ಕ್ರಿಕೆಟ್ ನಲ್ಲಿ 8000 ಪೂರೈಸಿದ ವಿಶೇಷ ದಾಖಲೆ ಮಾಡಿದ್ದಾರೆ. ಪುದುಚೇರಿ ವಿರುದ್ಧ ಆಡಿದ ಪಂದ್ಯದಲ್ಲಿ ರೈನಾ ಈ ದಾಖಲೆ ಮಾಡಿದ್ದಾರೆ.
ಈ ಮೂಲಕ ಈ ಸಾಧನೆ ಮಾಡಿದ ಪ್ರಥಮ ಭಾರತೀಯ ಆಟಗಾರನೆನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ರೈನಾ ಗಳಿಸಿದ್ದು ಮಾತ್ರ ಕೇವಲ 12 ರನ್. ಆದರೆ 300 ನೇ ಟಿ20 ಪಂದ್ಯವಾಡಿ ಧೋನಿ ಬಳಿಕ ಇಷ್ಟೊಂದು ಟಿ20 ಪಂದ್ಯವಾಡಿದ ದಾಖಲೆಯನ್ನೂ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.